ರಾಮಕುಂಜೇಶ್ವರ ವಿದ್ಯಾಸಂಸ್ಥೆ ವತಿಯಿಂದ ಪಿಡಿಒಗಳಿಗೆ ಸನ್ಮಾನ

0

ರಾಮಕುಂಜ: ಮೇ 31ರಂದು ನಿವೃತ್ತರಾದ ರಾಮಕುಂಜ ಹಾಗೂ ಆಲಂಕಾರು ಗ್ರಾ.ಪಂ.ಪಿಡಿಒಗಳಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ರಾಮಕುಂಜ ಗ್ರಾ.ಪಂ.ಪಿಡಿಒ ಜೆರಾಲ್ಡ್ ಮಸ್ಕರೇನಸ್ ಹಾಗೂ ಆಲಂಕಾರು ಗ್ರಾ.ಪಂ.ಪಿಡಿಒ ಜಗನ್ನಾಥ ಶೆಟ್ಟಿಯವರು ಮೇ 31ರಂದು ನಿವೃತ್ತರಾಗಿದ್ದರು. ಮೇ 31ರಂದು ಸಂಜೆ ಅವರ ಕಚೇರಿಗೆ ತೆರಳಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಸೇಸಪ್ಪ ರೈಯವರು ಶಾಲುಹಾಕಿ, ಹೂಗುಚ್ಛ ನೀಡಿ ಗೌರವಿಸಿ ಶುಭಹಾರೈಸಿದರು. ರಾಮಕುಂಜ ಗ್ರಾ.ಪಂ.ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ಸಿಬ್ಬಂದಿ ರಮ್ಯ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಕದ್ರ ಉಪಸ್ಥಿತರಿದ್ದರು. ಆಲಂಕಾರಿನಲ್ಲಿ ಆಲಂಕಾರು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯ, ಪ್ರದೀಪ್ ಬಾಕಿಲ, ಪ್ರಶಾಂತ ರೈ, ಗ್ರಾ.ಪಂ.ಕಾರ್ಯದರ್ಶಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here