ಪುತ್ತೂರು: ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದಿಂದ ಯಕ್ಷಗಾನ ಭಾಗವತಿಕೆ, ಚೆಂಡೆ, ಮದ್ದಳೆ ತರಗತಿಗಳ ಯುಕ್ಷಗಾನ ನಾಟ್ಯ ತರಗತಿ ಉದ್ಘಾಟನೆಯು ಜೂ.11 ರಂದು ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಪದ್ಯಾಣ ಶಂಕರನಾರಾಯಣ ಭಟ್ ರವರು ಯಕ್ಷಗಾನ ನಾಟ್ಯ ತರಗತಿಯನ್ನು ಉದ್ಘಾಟಿಸಲಿದ್ದಾರೆ. ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರು, ಗುರುಗಳು ಹಾಗೂ ಹಿಮ್ಮೇಳ ವಾದಕರಾದ ಗೋವಿಂದ ನಾಯಕ್ ಪಾಲೆಚ್ಚಾರು, ನಾಟ್ಯ ಗುರುಗಳಾದ ಪ್ರಚೇತ್ ಆಳ್ವ, ಗಣೇಶ್ ಭಟ್ ರವರು ಉಪಸ್ಥಿತಲಿರುವರು. ತರಗತಿಗೆ ಸೇರ ಬಯಸುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ತರಗತಿಗಳು ಪ್ರತಿ ಆದಿತ್ಯವಾರದಂದು ನಡೆಯಲಿರುವುದು. ಹೆಚ್ಚಿನ ಮಾಹಿತಿಗಾಗಿ ಮುಮ್ಮೇಳದ ಗುರುಗಳಾದ ಪ್ರಚೇತ ಆಳ್ವ(8494916615), ಕಾರ್ಯದರ್ಶಿ ಶಂಕರ ಭಟ್ (9448120721), ಗೋವಿಂದ ನಾಯಕ್ ಪಾಲೆಚ್ಚಾರು (9740790722)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.