ಹೊಸಗದ್ದೆ ಶಾಲಾ ಮಂತ್ರಿಮಂಡಲ ರಚನೆ

0

ನಾಯಕ ಪ್ರತೀಕ್‌ರಾಜ್-ಉಪನಾಯಕಿ ಫಾತಿಮಾತ್ ಹಫೀಳ


ಉಪ್ಪಿನಂಗಡಿ; ಬಜತ್ತೂರು ಗ್ರಾಮದ ಹೊಸಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಮುಖ್ಯಗುರು ಫೆಲ್ಸಿ ಡಯಾಸ್ ನಿರ್ದೇಶನದಲ್ಲಿ ಮತದಾನದ ಮೂಲಕ ರಚಿಸಲಾಯಿತು.


ಶಾಲಾ ನಾಯಕನಾಗಿ ೭ನೇ ತರಗತಿಯ ಪ್ರತೀಕ್‌ರಾಜ್ ಪಿ ಮತ್ತು ಉಪನಾಯಕಿಯಾಗಿ 6ನೇ ತರಗತಿಯ ಫಾತಿಮಾತ್ ಹಫೀಳ ಆಯ್ಕೆಗೊಂಡರು. ವಿರೋಧಪಕ್ಷದ ನಾಯಕಿಯಾಗಿ ೭ನೇ ತರಗತಿಯ ಜನನಿ ಬಿ.ಎಸ್ ಹಾಗೂ ವಿವಿಧ ಖಾತೆಗಳಿಗೆ ಸಂಬಂಧಿಸಿ ಮಂತ್ರಿಮಂಡಲದ ರಚನೆ ನಡೆಸಲಾಯಿತು. ಶಿಕ್ಷಕಿಯರಾದ ವಿದ್ಯಾ ಕೆ, ಮೇಬಲ್ ಗ್ರೇಸಿ ಲಸ್ರಾದೋ, ಮಾಲತಿ ಕೆ ಹಾಗೂ ಗೌರವ ಶಿಕ್ಷಕಿ ಪವಿತ್ರ ಚುನಾವಣಾ ಪ್ರಕ್ರಿಯೆ ನಡೆಸಿದರು.

LEAVE A REPLY

Please enter your comment!
Please enter your name here