ರೆಂಜಲಾಡಿಯಲ್ಲಿ`ಸಂಪೂರ್ಣ ಶಿಕ್ಷಣ ಜಮಾಅತ್’ ಸಭೆ

0

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ-ಆರ್.ಎಂ ಅಲೀ ಹಾಜಿ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ ಆಶ್ರಯದಲ್ಲಿ`ಸಂಪೂರ್ಣ ಶಿಕ್ಷಣ ಜಮಾಅತ್’ ಎನ್ನುವ ಘೋಷ ವಾಕ್ಯದಡಿಯಲ್ಲಿ ಜಮಾಅತ್ ಸಭೆ ಜೂ.8ರಂದು ರಾತ್ರಿ ರೆಂಜಲಾಡಿ ಮಸೀದಿ ವಠಾರದಲ್ಲಿ ನಡೆಯಿತು.

ರೆಂಜಲಾಡಿ ಮಸೀದಿಯ ಅಧ್ಯಕ್ಷ ಆರ್.ಎಂ ಅಲೀ ಹಾಜಿ ಮಾತನಾಡಿ ನಮ್ಮ ರೆಂಜಲಾಡಿ ಜಮಾಅ‌ತ್ ನ್ನು ಸಂಪೂರ್ಣ ಸುಶಿಕ್ಷಿತ ಜಮಾಅತ್ ಮಾಡುವ ಉದ್ದೇಶಕ್ಕೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು‌ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ, ಉನ್ನತ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆ ಮತ್ತು ಪೂರಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುವುದಾಗಿ ಹೇಳಿದರು. ಯಾರು ಕೂಡಾ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಬಾರದು. ನಿರ್ದಿಷ್ಟ ಗುರಿಯೊಂದಿಗೆ ಶಿಕ್ಷಣ ಪಡೆದು ಇಟ್ಟ ಗುರಿ ತಲುಪಬೇಕು, ಈ ಬಗ್ಗೆ ಪೋಷಕರು ಹೆಚ್ಚಿನ ಗಮನ ಮತ್ತು ಆಸಕ್ತಿ ಹೊಂದಿರಬೇಕು ಎಂದು ಅವರು ಕಿವಿ ಮಾತು ಹೇಳಿದರು.

ರೆಂಜಲಾಡಿ ಮಸೀದಿಯ ಮಾಜಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು, ಸರ್ವೆ ಕಲ್ಪಣೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಉದ್ಯಮಿ ಉಮ್ಮರ್ ಸುಲ್ತಾನ್, ಯಂಗ್‌ಮೆನ್ಸ್ ಅಧ್ಯಕ್ಷ ಯೂಸುಫ್ ರೆಂಜಲಾಡಿ ಮೊದಲಾದವರು ಸಮಯೋಚಿತವಾಗಿ ಮಾತನಾಡಿ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತನಾಡಿದರು. ವೇದಿಕೆಯಲ್ಲಿ ರೆಂಜಲಾಡಿ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಕಡ್ಯ, ಆದರ್ಶ ಸೇವಾ ಸಂಘದ ಅಧ್ಯಕ್ಷ ಇಮ್ರಾನ್ ಮಲ್ನಾಡ್, ಇಬ್ರಾಹಿಂ ರೆಂಜಲಾಡಿ, ಮಸೀದಿಯ ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು ಮತ್ತು ಜಮಾಅತರು ಉಪಸ್ಥಿತರಿದ್ದರು. ರೆಂಜಲಾಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here