ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರುಗಳ ಎಲ್ಲಾ 13 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.
ಸಾಮಾನ್ಯ 7, ಪ.ಜಾತಿ ಮೀಸಲು 1, ಪ.ಪಂಗಡ ಮೀಸಲು 1, ಹಿ.ವರ್ಗ ಎ ಮೀಸಲು 1, ಹಿ.ವರ್ಗ ಬಿ.ಮೀಸಲು 1, ಮಹಿಳಾ ಮೀಸಲು ಸ್ಥಾನ2 ಒಟ್ಟು 13 ಸ್ಥಾನಗಳಿಗೆ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಕೆಯಾಗಿದ್ದು ಎಲ್ಲಾ 13 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಕೆ.ಗುಡ್ಡಪ್ಪ ರೈ ಕೋರಿಕ್ಕಾರು, ಬಿ.ಚಂದ್ರಹಾಸ ರೈ ಬೊಳಿಕಳಮಠ, ಎಸ್.ಬಿ.ಜಯರಾಮ ರೈ ಬಳಜ್ಜ, ಡಿ.ಪದ್ಮನಾಭ ರೈ ದೇರ್ಲ, ರಘುಚಂದ್ರ ಭಟ್ ಅಲೆಮಾರು ಮೇರ್ಲ, ಲೋಕನಾಥ ಪಕ್ಕಳ ನೂಜಿ ಮತ್ತು ಪಿ.ವಿನಯಚಂದ್ರ ಪಾಲ್ತಾಡಿ ಕೆಳಗಿನ ಮನೆ, ಪ.ಪಂಗಡದಿಂದ ಹರಿಣಾಕ್ಷಿ ಅಜಿಲ್ತಡ್ಕ ಪಾಲ್ತಾಡಿ, ಪ.ಜಾತಿಯಿಂದ ಪ್ರವೀಣ ಕೆ ಕಣಿಯಾರು, ಹಿ.ವರ್ಗ ಎ.ಮೀಸಲು ಕ್ಷೇತ್ರದಿಂದ ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ಹಿ.ವರ್ಗ ಬಿ.ಮೀಸಲು ಕ್ಷೇತ್ರದಿಂದ ಕೆ.ರಾಮಣ್ಣ ಗೌಡ ಜ್ಯೋತಿನಿಲಯ, ಮಹಿಳಾ ಮೀಸಲು ಸ್ಥಾನದಿಂದ ಈಶ್ವರಿ ಜೆ.ರೈ ಸಂತೋಷ್‌ನಗರ ಮತ್ತು ದೇವಿಕಾ ಎ.ಎಸ್ ಅಂಗಡಿಹಿತ್ಲುರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.