ನೆಲ್ಯಾಡಿ: ಮಂಗಳೂರು ಶಾಸಕ, ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಜೂ.12ರಂದು ನೆಲ್ಯಾಡಿ ಸಮೀಪದ ಕೋಲ್ಪೆ ಬದ್ರಿಯಾ ಜುಮಾ ಮಸೀದಿ, ಕೊಣಾಲು ಸರಕಾರಿ ಶಾಲೆಗೆ ಭೇಟಿ ನೀಡಿದರು.
ಬೆಳಿಗ್ಗೆ ಕೋಲ್ಪೆ ಬದ್ರಿಯಾ ಜುಮಾ ಮಸೀದಿಗೆ ಆಗಮಿಸಿದ ಯು.ಟಿ.ಖಾದರ್ ಅವರನ್ನು ಮಸೀದಿ ಆಡಳಿತ ಸಮಿತಿಯವರು ಸ್ವಾಗತಿಸಿದರು. ಬಳಿಕ ಅವರು ಕೋಲ್ಪೆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕೋಲ್ಪೆ ಮಸೀದಿ ವಠಾರದಲ್ಲಿರುವ ಅಜ್ಜ, ಅಜ್ಜಿಯ ಸಮಾಧಿಯಲ್ಲಿ ಪ್ರಾರ್ಥನೆ ಮಾಡಿದರು. ಕೋಲ್ಪೆ ಮಸೀದಿಯ ಆಡಳಿತ ಸಮಿತಿ ವತಿಯಿಂದ ಯು.ಟಿ.ಖಾದರ್ ಅವರಿಗೆ ಶಾಲು ಹಾಕಿ ಅಭಿನಂದಿಸಲಾಯಿತು. ಮಸೀದಿ ಮುದರ್ರಿಸ್ ಶರೀಫ್ ದಾರಿಮಿ ಅಲ್‌ಹೈತಮಿ, ಆಡಳಿತ ಸಮಿತಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಗೌರವಾಧ್ಯಕ್ಷ ಬಾವಾ ತಂಙಳ್, ಪ್ರಧಾನ ಕಾರ್ಯದರ್ಶಿ ಯು.ಕೆ.ಉಮ್ಮರ್, ಕಾರ್ಯದರ್ಶಿ ರಮ್ಜಾನ್ ಸಾಹೇಬ್, ಉಪಾಧ್ಯಕ್ಷರಾದ ಅಬ್ದುಲ್ ಕುಂಞಿ ಕೊಂಕೋಡಿ, ಇಕ್ಬಾಲ್ ಎಸ್., ಕೋಶಾಧಿಕಾರಿ ನಾಸೀರ್ ಸಮರಗುಂಡಿ, ಸದಸ್ಯರಾದ ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಮಹಮ್ಮದ್ ರಫೀಕ್ ಕೆ.ಇ., ಅಬ್ದುಲ್ ಹಮೀದ್ ಅಸ್ಕಾಫ್, ಯು.ಕೆ.ಹಮೀದ್, ಕೆ.ಎಂ.ಮಹಮ್ಮದ್ ಮತ್ತಿತರರು ಅಭಿನಂದಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪ ರಾಮಕುಂಜ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಉದ್ಯಮಿ ಕೆ.ಪಿ.ತೋಮಸ್, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮತ್ತಿತರರು ಸ್ಪೀಕರ್ ಯು.ಟಿ.ಖಾದರ್ ಅವರ ಜೊತೆಗಿದ್ದರು.
ಕೊಣಾಲು ಶಾಲೆಗೆ ಭೇಟಿ:
ಕೋಲ್ಪೆ ಮಸೀದಿ ಭೇಟಿ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಎಸ್‌ಡಿಎಂಸಿ ವತಿಯಿಂದ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮುಹಮ್ಮದ್ ರಫೀಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಹಾಜಿ, ಕೋಲ್ಪೆ ಮಸೀದಿ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್, ಎಸ್‌ಡಿಎಂಸಿ ಸದಸ್ಯರಾದ ಗಣೇಶ್ ಟೈಲರ್, ಕೆ.ಪಿ ಅಶ್ರಫ್, ಪಿ.ಜೆ.ಜೇಮ್ಸ್, ಸಂತೋಷ್ ಎಣ್ಣೆತ್ತೋಡಿ, ಬಾಬು ಪಿ., ಮುಖ್ಯ ಶಿಕ್ಷಕಿ ಗಿರಿಜಾ ಪಿ., ಹಾಗೂ ಶಾಲಾ ಶಿಕ್ಷಕರು, ಹಳೆವಿದ್ಯಾರ್ಥಿಗಳು ಯು.ಟಿ.ಖಾದರ್ ಅವರನ್ನು ಸ್ವಾಗತಿಸಿ, ಗೌರವಿಸಿದರು. ಆ ಬಳಿಕ ಅವರು ಗೋಳಿತ್ತೊಟ್ಟು ಮಸೀದಿ, ಗೋಳಿತ್ತೊಟ್ಟಿನಲ್ಲಿರುವ ಸಂಬಂಧಿಕರಾದ ಅಬ್ದುಲ್ ಮಲಿಕ್, ನಾಸೀರ್ ಸಮರಗುಂಡಿ, ಅಬ್ದುಲ್ ಹಮೀದ್ ಅಸ್ಕಾಪ್, ನಾಸಿರ್ ಹೊಸಮನೆ ಅವರ ಮನೆಗೂ ಭೇಟಿ ನೀಡಿ ಮಧ್ಯಾಹ್ನದ ವೇಳೆಗೆ ಮಂಗಳೂರಿಗೆ ತೆರಳಿದರು.
ಮನೆ ಕೆಲಸದಾಕೆಯಾಗಿದ್ದ ಲೀಲಾವತಿ ಪೂಜಾರಿ ಅವರ ಮನೆಗೂ ಭೇಟಿ:
ಯು.ಟಿ.ಖಾದರ್ ಅವರು ಬಾಲ್ಯದಲ್ಲಿ ಬೆಳೆದ ಮಂಗಳೂರು ಕದ್ರಿಯ ಮನೆಯಲ್ಲಿ ಸುಮಾರು 10 ವರ್ಷಕ್ಕೂ ಹೆಚ್ಚು ಸಮಯ ಮನೆ ಕೆಲಸ ಮಾಡಿಕೊಂಡಿದ್ದ ಗೋಳಿತ್ತೊಟ್ಟು ಜನತಾ ಕಾಲೋನಿ ನಿವಾಸಿ ಶ್ರೀಮತಿ ಲೀಲಾವತಿ ಪೂಜಾರಿ ಅವರ ಮನೆಗೂ ಸ್ಪೀಕರ್ ಯು.ಟಿ.ಖಾದರ್ ಅವರು ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.
ಶ್ರೀಮತಿ ಲೀಲಾವತಿ ಹಾಗೂ ದಿ.ಸುಂದರ ಪೂಜಾರಿ ಅವರ ಪುತ್ರಿ, ಪದವಿ ವಿದ್ಯಾರ್ಥಿನಿಯಾಗಿದ್ದ ಮಮತಾ ಇತ್ತೀಚೆಗೆ ನಿಧನರಾಗಿದ್ದು ಖಾದರ್ ಅವರು ಮನೆಯವರಿಗೆ ಸಾಂತ್ವನ ಹೇಳಿದರು. ಶ್ರೀಮತಿ ಲೀಲಾವತಿ ಅವರ ಸಹೋದರ ದೇಜಪ್ಪ ಪೂಜಾರಿಯವರಿಗೂ ಆರ್ಥಿಕ ನೆರವು ನೀಡಿದರು. ತಮ್ಮ ಮನೆ ಕೆಲಸ ಮಾಡಿಕೊಂಡಿದ್ದ ಶ್ರೀಮತಿ ಲೀಲಾವತಿ ಅವರನ್ನು ನೆನಪಿಸಿಕೊಂಡು ಅವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿರುವ ಯು.ಟಿ.ಖಾದರ್ ಅವರ ಸರಳ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.