ಶಾಲಾ ಮುಖ್ಯ ಮಂತ್ರಿಯಾಗಿ ವಾಸಿಲ್ ಮುಬಾರಕ್ ಉಪಮುಖ್ಯ ಮಂತ್ರಿಯಾಗಿ ದಿಶಾ
ನಿಡ್ಪಳ್ಳಿ; ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇದರ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಜೂ.12 ರಂದು ಚುನಾವಣೆ ಮೂಲಕ ರಚಿಸಲಾಯಿತು. ಮುಖ್ಯ ಮಂತ್ರಿಯಾಗಿ ವಾಸಿಲ್ ಮುಬಾರಕ್ (7ನೇತರಗತಿ),ಉಪಮುಖ್ಯಮಂತ್ರಿಯಾಗಿ ದೀಶಾ(6ನೇ)ಆಯ್ಕೆಯಾದರು.
ಗೃಹಮಂತ್ರಿಯಾಗಿ ವಾಸಿಲ್(7ನೇ) ಉಪ ಗೃಹಮಂತ್ರಿಯಾಗಿ ಶರಣ್(5ನೇ),ಆರೋಗ್ಯ ಮತ್ತು ಸ್ವಚ್ಚತಾ ಮಂತ್ರಿಯಾಗಿ ಶ್ರೀಯಾ(7ನೇ),ಉಪ ಆರೋಗ್ಯ ಮಂತ್ರಿಯಾಗಿ ಆಯಿಷತ್ ಸಫಾ( 5ನೇ),ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಅದ್ವಿತ್(7ನೇ),ಉಪ ಕೃಷಿ ಮಂತ್ರಿಯಾಗಿ ಮಿಥುನ್(6ನೇ),ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಬೀಬಿ ಆಸಿಯ(6ನೇ),ಉಪ ಶಿಕ್ಷಣ ಮಂತ್ರಿಯಾಗಿ ಅಬ್ದುಲ್ ವಾರಿಸ್(5ನೇ),ಸಾಂಸ್ಕೃತಿಕ ಮಂತ್ರಿಯಾಗಿ ನುಹಾ ಫಾತಿಮ(6ನೇ),ಉಪ ಸಾಂಸ್ಕೃತಿಕ ಮಂತ್ರಿಯಾಗಿ ಫಿದ,ಕ್ರೀಡಾ ಮಂತ್ರಿಯಾಗಿ ಆಕಾಶ್ (7ನೇ),ಉಪ ಕ್ರೀಡಾ ಮಂತ್ರಿಯಾಗಿ ಮುಬಶಿಲ್ (6ನೇ),ಆಹಾರ ಮಂತ್ರಿಯಾಗಿ ಭುವನೇಶ್(5ನೇ),ಉಪ ಆಹಾರ ಮಂತ್ರಿಯಾಗಿ ಜಲಜಾಕ್ಷಿ (5ನೇ),ಆಯ್ಕೆಯಾದರು.ಮುಖ್ಯ ಗುರು ಲಕ್ಷ್ಮಿ ಇವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕಿಯರಾದ ಕುಮುದ,ಐರಿನಾ ಕ್ರಾಸ್ತಾ,ಸುಜಾತಾ ಇವರು ಸಹಕರಿಸಿದರು.