ಪುತ್ತೂರು: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವರ್ಷಿಣಿ ಆಳ್ವರವರು 601 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದರು.
ಇದೀಗ ವರ್ಷಿಣಿ ಆಳ್ವರವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಆಂಗ್ಲ ಭಾಷಾ ವಿಷಯದಲ್ಲಿ ಎಂಟು ಹೆಚ್ಚುವರಿ ಅಂಕ ಪಡೆದು ಮೊತ್ತವನ್ನು 609ಕ್ಕೆ ಏರಿಸಿಕೊಂಡಿದ್ದಾರೆ ಮಾತ್ರವಲ್ಲ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ವರ್ಷಿಣಿ ಆಳ್ವರವರು ಉದ್ಯಮಿ ಶಿವರಾಂ ಆಳ್ವ ಹಾಗೂ ಸೀಮಾ ಎಸ್. ಆಳ್ವರವರ ಪುತ್ರಿ ಹಾಗೂ ಅಮೋಘ್ ಆಳ್ವರವರ ಸಹೋದರಿ.