ಪುತ್ತೂರು: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕೊಯಿಲ ಬಡಗನ್ನೂರು ಇಲ್ಲಿ 2023 24ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ಪ್ರಿನ್ಸನ್ ಲಾಯ್ ಡಿಸೋಜಾ (ಏಳನೇ ತರಗತಿ), ಉಪಮುಖ್ಯಮಂತ್ರಿಯಾಗಿ ಮಶೂರತ್ ಶಾಝೀ ಫಾತಿಮಾ (ಏಳನೇ ತರಗತಿ) ಆಯ್ಕೆಯಾದರು.
ಶಿಕ್ಷಣ ಮಂತ್ರಿಗಳಾಗಿ ಫಾತಿಮತ್ ಬುಶ್ರಾ, ಪ್ರಿನ್ವಿಶಾ ಡಿಸೋಜ. ಆರೋಗ್ಯಮಂತ್ರಿಗಳಾಗಿ ಯಜ್ಞೇಶ್ ಮತ್ತು ದಕ್ಷ, ತೋಟಗಾರಿಕಾ ಮಂತ್ರಿಗಳಾಗಿ ಮುಹಮ್ಮದ್ ಮುರ್ಷಿದ್, ತೇಜಸ್, ಕ್ರೀಡಾ ಮಂತ್ರಿಗಳಾಗಿ ಮುಹಮ್ಮದ್ ತಮೀಝ್, ಪುನೀತ್. ಕಾನೂನು ಮಂತ್ರಿಗಳಾಗಿ ಧೃತಿ ಆರ್ ರೈ, ಮೊಹಮ್ಮದ್ ತಮೀಝ್. ಗೃಹ ಮಂತ್ರಿಗಳಾಗಿ ದಿವಿತ್ ರೈ, ದಕ್ಷ ಜೆ ರೈ. ಸ್ವಚ್ಛತಾಮಂತ್ರಿಯಾಗಿ ಫಾತಿಮಾ ಸುಹಾನ, ಆರಾಧ್ಯ ಪಿ. ನೀರಾವರಿ ಮಂತ್ರಿಯಾಗಿ ಅಹಮ್ಮದ್ ಸಜಾದ್, ಎನ್.ಎ. ಮೊಹಮ್ಮದ್ ಅನಾಸ್. ಆಹಾರ ಮಂತ್ರಿಯಾಗಿ ಪ್ರಿನ್ವಿಶ ಡಿಸೋಜಾ, ಉದಿತ್ ಯು ಆರ್. ವಿತ್ತ ಸಚಿವರಾಗಿ ಪ್ರಿನ್ಸನ್ ಲಾಯ್ ಡಿಸೋಜಾ, ದೃತಿ ಆರ್. ರೈ ಆಯ್ಕೆಯಾದರು. ಶಾಲಾ ಮುಖ್ಯ ಗುರು ಪುಷ್ಪಾವತಿ ಎಂ. ಬಿ. ಪ್ರಮಾಣವಚನ ಬೋಧಿಸಿದರು. ಮಂತ್ರಿಮಂಡಲದ ಚುನಾವಣೆಯು ಇವಿಎಂ ಆಪ್ ಬಳಸಿ ಯಶಸ್ವಿಯಾಗಿ ನಡೆಯಿತು. ಸಹಶಿಕ್ಷಕರಾದ ಗಿರೀಶ್ ಡಿ., ಅತಿಥಿ ಶಿಕ್ಷಕಿ ಸರಳ ಡಿ., ಗೌರವ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು