ಸಿಇಟಿ 2023: ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ 73, 114, 156ನೇ ರ‍್ಯಾಂಕ್ ದಾಖಲು

0

ಇನ್ನೂರರೊಳಗೆ 3, ಐನೂರರ ಒಳಗೆ 11, ಸಾವಿರದೊಳಗೆ 19 ರ‍್ಯಾಂಕ್
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2023 ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ. ಕೊಕ್ಕಡದ ಕೃಷ್ಣಮೂರ್ತಿ ಕೆ ಮತ್ತು ಅನುಪಮಾ ಕೆ ದಂಪತಿಯ ಪುತ್ರ ಶ್ರೀಶ ಶರ್ಮ ಇಂಜಿನಿಯರಿಂಗ್ ವಿಭಾಗದಲ್ಲಿ 114ನೇ ರಾಂಕ್ ಗಳಿಸಿದರೆ, ಬಿ ಫಾರ್ಮಾ ಹಾಗೂ ಡಿ ಫಾರ್ಮಾ ವಿಭಾಗದಲ್ಲಿ 453ನೇ ರಾಂಕ್ ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ವಸಂತ ಕೃಷ್ಣಮೂರ್ತಿ ಹೆಗ್ಡೆ ಹಾಗೂ ರೇಖಾ ದಂಪತಿಗಳ ಪುತ್ರ ತೇಜಸ್ವಿ ವಸಂತ ಹೆಗ್ಡೆ ಇಂಜಿನಿಯರಿಂಗ್ ವಿಭಾಗದಲ್ಲಿ 156ನೇ ರ‍್ಯಾಂಕ್ ಗಳಿಸಿದರೆ, ಬಿ ಫಾರ್ಮಾ ಹಾಗೂ ಡಿ ಫಾರ್ಮಾ ವಿಭಾಗದಲ್ಲಿ 607ನೇ ರ‍್ಯಾಂಕ್ ಗಳಿಸಿದ್ದಾರೆ.


ಬೆಳ್ಳಾರೆಯ ಬಿ ಕೆ ಸೂರ್ಯನಾರಾಯಣ ಹಾಗೂ ವಿದ್ಯಾಕುಮಾರಿ ದಂಪತಿಗಳ ಪುತ ಆಶೀಶ್ ಗೋವಿಂದ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 73ನೇ ರ‍್ಯಾಂಕ್, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 250ನೇ ರ‍್ಯಾಂಕ್, ವೆಟರ್ನರಿ ವಿಭಾಗದಲ್ಲಿ 258ನೇ ರ‍್ಯಾಂಕ್, ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 258ನೇ ರ‍್ಯಾಂಕ್, ಇಂಜಿನಿಯರಿಂಗ್ ವಿಭಾಗದಲ್ಲಿ 331ನೇ ರ‍್ಯಾಂಕ್ ಗಳಿಸಿದರೆ, ಬಿ ಫಾರ್ಮಾ ವಿಭಾಗದಲ್ಲಿ 376ನೇ ರ‍್ಯಾಂಕ್ ಪಡೆದಿದ್ದಾರೆ. ಕಡಬದ ದಿವಾಕರ ಕೆ ಹಾಗೂ ಭುವನೇಶ್ವರಿ ದಂಪತಿಗಳ ಪುತ್ರಿ ವೀಕ್ಷಿತಾ ಕೆ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 1143 ರ‍್ಯಾಂಕ್ ಗಳಿಸಿದರೆ, ಇಂಜಿನಿಯರಿಂಗ್ ವಿಭಾಗದಲ್ಲಿ 1726ನೇ ರ‍್ಯಾಂಕ್, ನೆಟ್ಲಮುಡ್ನೂರಿನ ಕೆ ಗೋಪಾಲ ಗೌಡ ಮತ್ತು ಶೀಲಾವತಿ ಎನ್ ದಂಪತಿಯ ಪುತ್ರ ಸುಜಿತ್ ಕೆ ಜಿ ಇಂಜಿನಿಯರಿಂಗ್ ವಿಭಾಗದಲ್ಲಿ 1824 ರ‍್ಯಾಂಕ್ ಪಡೆದಿದ್ದಾರೆ. ಕಾಸರಗೋಡಿನ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸುಧಾ ದಂಪತಿಗಳ ಪುತ್ರ ಅನಂತರಾಮ ಎಸ್ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 806, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 1470, ಇಂಜಿನಿಯರಿಂಗ್ ವಿಭಾಗದಲ್ಲಿ 1871, ವೆಟರ್ನರಿ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ 1886 ಬಿ ಫಾರ್ಮ ವಿಭಾಗದಲ್ಲಿ 2390ನೇ ರ‍್ಯಾಂಕ್ ಗಳಿಸಿದ್ದಾರೆ. ಮೊಟ್ಟೆತಡ್ಕದ ಯಶೋಧರ ಎಸ್ ಮತ್ತು ರಶ್ಮಿ ಟಿ ಎಂ ದಂಪತಿಯ ಪುತ್ರಿ ಯಶಸ್ವಿ ಶೆಟ್ಟಿ ಎಸ್ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 523, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 1297, ಇಂಜಿನಿಯರಿಂಗ್ ವಿಭಾಗದಲ್ಲಿ 1887, ವೆಟರ್ನರಿ ವಿಭಾಗದಲ್ಲಿ 1976 ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 1976 ರಾಂಕ್‌ಗೆ ಭಾಜನರಾದರೆ ಕಡಬದ ಜತ್ತಪ್ಪ ಗೌಡ ಮತ್ತು ಅನಿತಾ ದಂಪತಿಯ ಪುತ್ರಿ ವಿಧಾತ್ರಿ ಬಿ ಜೆ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 851, ವೆಟರ್ನರಿ ವಿಭಾಗದಲ್ಲಿ 1078, ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 1078, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 1178, ಬಿ ಫಾರ್ಮ ವಿಭಾಗದಲ್ಲಿ 1373 ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 2274ನೇ ರ‍್ಯಾಂಕ್ ಪಡೆದಿದ್ದಾರೆ.
ಬೆಂಗಳೂರಿನ ಕುಶಿಕರ ಬಿ ಎಸ್ ಹಾಗೂ ಉದಯಕಲಾ ಎನ್ ಎಲ್ ದಂಪತಿಗಳ ಪುತ್ರ ಪ್ರಜ್ವಲ್ ಬಿ ಕೆ ಇಂಜಿನಿಯರಿಂಗ್ ವಿಭಾಗದಲ್ಲಿ 2834 ನೇ ರ‍್ಯಾಂಕ್, ಬಲ್ನಾಡಿನ ಮಹಾಬಲೇಶ್ವರ ಭಟ್ ವೈ ಮತ್ತು ಗೀತಾ ಕುಮಾರಿ ದಂಪತಿಯ ಪುತ್ರಿ ದಿಶಾಕ ವೈ ಭಟ್ ಇಂಜಿನಿಯರಿಂಗ್ ವಿಭಾಗದಲ್ಲಿ 2856ನೇ ರ‍್ಯಾಂಕ್ ಗಳಿಸಿದರೆ, ಬೆಟ್ಟಂಪಾಡಿಯ ದಿನೇಶ್ ಮರಡಿತಾಯ ಮತ್ತು ಸಂಧ್ಯಾ ದಂಪತಿಯ ಪುತ್ರಿ ಶ್ರಾವಣಿ ಪಿ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 998, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 1568, ವೆಟರ್ನರಿ ವಿಭಾಗದಲ್ಲಿ 2784 ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 2784ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 3016ನೇ ರ‍್ಯಾಂಕ್ ಪಡೆದಿದ್ದಾರೆ. ಪಡೀಲಿನ ವಸಂತ ನಾಯ್ಕ್ ಎಂ ಮತ್ತು ಹರಿಣಾಕ್ಷಿ ಬಿ ದಂಪತಿಯ ಪುತ್ರಿ ಗ್ರೀಷ್ಮ ವಿ ನಾಯ್ಕ್ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 1270, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 2070, ವೆಟರ್ನರಿ ವಿಭಾಗದಲ್ಲಿ 2379, ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 2380ನೇ ರ‍್ಯಾಂಕ್, ಇಂಜಿನಿಯರಿಂಗ್ ವಿಭಾಗದಲ್ಲಿ 3196ನೇ ರ‍್ಯಾಂಕ್ ಗಳಿಸಿರುತ್ತಾರೆ. ಕೆದಂಬಾಡಿಯ ರವಿನಾರಾಯಣ ಭಟ್ ಎನ್ ಹಾಗೂ ವಿದ್ಯಾಸರಸ್ವತಿ ಎನ್ ಆರ್ ದಂಪತಿಗಳ ಪುತ್ರಿ ಚೈತ್ರ ಭಟ್ ವೈ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 1565, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 2357ನೇ ರಾಂಕ್, ಇಂಜಿನಿಯರಿಂಗ್ ವಿಭಾಗದಲ್ಲಿ 3197 ದಾಖಲಿಸಿದರೆ ಕಾಸರಗೋಡಿನ ಕೇಶವ ಶರ್ಮ ಹಾಗೂ ಶ್ರೀವತ್ಸಲ ದಂಪತಿಗಳ ಪುತ್ರಿ ಪ್ರಣಮ್ಯ ಬಿ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 1682, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 2151ನೇ ಇಂಜಿನಿಯರಿಂಗ್ ವಿಭಾಗದಲ್ಲಿ 3785ನೇ ರ‍್ಯಾಂಕ್ ಗಳಿಸಿದ್ದಾರೆ.
ಇನ್ನು, ಸುಳ್ಯದ ಸೀತಾರಾಮ ಎನ್ ಜಿ ಮತ್ತು ಜಯಲಕ್ಷ್ಮಿ ಕೆ ದಂಪತಿಯ ಪುತ್ರ ಧೀರಜ್ ಬಿ ಎಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 1986, ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ 1343ನೇ ರ‍್ಯಾಂಕ್, ಇಂಜಿನಿಯರಿಂಗ್ ವಿಭಾಗದಲ್ಲಿ 3946ನೇ ರ‍್ಯಾಂಕ್ ದಾಖಲಿಸಿದರೆ ಕಬಕದ ಶೈಲೇಶ್ ಎಂ ಎಲ್ ಮತ್ತು ಸರಸ್ವತಿ ರಾವ್ ಪಿ ದಂಪತಿಯ ಪುತ್ರಿ ಶಮಿತಾ ಎಂ ಎಸ್ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 2655ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 3769ನೇ ರ‍್ಯಾಂಕ್ ಗಳಿಸಿರುತ್ತಾರೆ. ಪುತ್ತೂರಿನ ಮಲ್ಲಿಕಾರ್ಜುನ ಹಾಗೂ ಯಶೋದಾ ದಂಪತಿ ಪುತ್ರ ಪುನೀತ್ ಎಂ.ಜಿ ಅಗ್ರಿ ಬಿಎಸ್ಸಿ ವಿಭಾಗದಲ್ಲಿ 2336ನೇ ರ‍್ಯಾಂಕ್ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದ ಸಂತಸ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here