ಸೌಜನ್ಯ ಪ್ರಕರಣ- ಸಂತೋಷ್‌ ಪರ ವಾದಿಸಿದ್ದ ಪುತ್ತೂರಿನ ವಕೀಲ ಮೋಹಿತ್‌ ಕುಮಾರ್

0


ಪುತ್ತೂರು
: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ನ್ಯಾಯಾಲಯದಲ್ಲಿ ವಾದಿಸಿದ್ದು ಪುತ್ತೂರಿನ ವಕೀಲ ಕೊಳ್ತಿಗೆ ಗ್ರಾಮದ ಮೋಹಿತ್ ಕುಮಾರ್ ಅಡ್ಕಾರ್’ಮಜಲ್ ಎಂದು ತಿಳಿದುಬಂದಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಸಂತೋಷ್ ರಾವ್ ಅವರಿಂದ 1 ರೂ.ವನ್ನು ಪಡೆಯದೇ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ಸಂತೋಷ್ ರಾವ್ ಅವರನ್ನು ಆರೋಪಿ ಎಂದು‌ ಬಂಧಿಸಿದಾಗಲೇ ಹಲವು ಅನುಮಾನಗಳು‌ ಹುಟ್ಟಿಕೊಂಡಿತ್ತು. ಈ ಅನುಮಾನಗಳ ಎಳೆಯನ್ನು‌ ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮೋಹಿತ್ ಅವರ ವಾದವನ್ನು ನ್ಯಾಯಾಲಯ ಎತ್ತಿ‌ ಹಿಡಿದಿದೆ. ನ್ಯಾಯಾಲಯದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಪಡಿಸುವಲ್ಲಿ ಮೋಹಿತ್ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here