ಸಾಂದಿಪನಿ ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ನರಿಮೊಗರು ಸಾಂದಿಪನಿ ಶಾಲಾ ಮಂತ್ರಿಮಂಡಲವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ರವರ ನೇತೃತ್ವದಲ್ಲಿ ಜೂ.16 ರಂದು ರಚಿಸಲಾಯಿತು. ಪ್ರಜಾಪ್ರಭುತ್ವ ಮತ್ತು ಮತದಾನದ ಅರಿವು ಮೂಡಿಸುವುದರೊಂದಿಗೆ ಚುನಾವಣೆಯ ಮೂಲಕ ಶಾಲಾ ನಾಯಕ, ಉಪನಾಯಕ ಆಯ್ಕೆ ಮಾಡಲಾಯಿತು. ಈ ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಕೆ ಜೆ ಹಾಗೂ ಉಪನಾಯಕನಾಗಿ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ರೈ ಆಯ್ಕೆಗೊಂಡರು.ಚುನಾವಣಾ ಜವಾಬ್ದಾರಿಯನ್ನು ಶಾಲಾ ಸಹ ಶಿಕ್ಷಕರಾದ ಪ್ರಶಾಂತಿ ಪಿ ಹಾಗೂ ರಮೇಶ್ ಎನ್ ರವರು ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here