ಪಡಿಬಾಗಿಲು ಹಿ.ಪ್ರಾ ಶಾಲೆಯ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

0

ವಿಟ್ಲ: ಪಡಿಬಾಗಿಲು ಹಿ.ಪ್ರಾ ಶಾಲೆಯ 2009-2010ರ ಸಾಲಿನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2009-2010ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧ್ಯಾಪಕರಾದ ಭಾಸ್ಕರ ಅಡ್ವಾಳ, ರಾಜೇಂದ್ರ ಪ್ರಸಾದ್, ರವಿ ನಾಯ್ಕ, ರೇವತಿ, ಬೃಂದಾ, ಮಲ್ಲಿಕಾ, ಜಯಂತಿ ಹಾಗೂ ಸುರೇಖರವರನ್ನು ಗೌರವಿಸಲಾಯಿತು.

ಶಾಲಾ ವಿದ್ಯಾಸಿರಿ ಟ್ರಸ್ಟ್ ನ ಅಧ್ಯಕ್ಷ ಫ್ರಭಾಕರ ಶೆಟ್ಟಿ, ಗೌರವ ಅಧ್ಯಕ್ಷ ಲಿಂಗಪ್ಪ ಗೌಡ, ಕೇಪು ಗ್ರಾ.ಪಂ. ಸದಸ್ಯ ಜಗಜೀವನ್ ರಾಮ್ ಶೆಟ್ಟಿ, ಜಿನಚಂದ್ರ ಜೈನ್, ಶಾಲಾ ಎಸ್‌ ಡಿಎಂಸಿ ಅಧ್ಯಕ್ಷೆ ವಿಶಾಲಕ್ಷಿ, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಕೆ. ರೈ ಮತ್ತು 2009-2010 ನೇ ಬ್ಯಾಚಿನ ಹಳೆವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ, ಎಸ್‌ ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಸವಿ ನೆನಪಿಗಾಗಿ ಹಳೆವಿದ್ಯಾರ್ಥಿಗಳು ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here