ಕಡಬ: ಬಿಳಿನೆಲೆ ಬೈಲು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯು ಜೂನ್.21ರಂದು ನಡೆಯಿತು. ಯೋಗಶಿಕ್ಷಕ ವೀಜೇಶ್ ಅವರು ಮಾತನಾಡಿ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಜೂನ್ 21ರಂದೆ ಯೋಗ ದಿನಾಚರಣೆಯನ್ನು ಯಾಕೆ ಆಚರಿಸುತ್ತೇವೆಂದರೆ ಅತ್ಯಂತ ಹೆಚ್ಚು ಹಗಲುಳ್ಳ ದಿನ. ಆದ್ದರಿಂದ ಇದು ಹೆಚ್ಚು ಮಹತ್ವ ಪಡೆದಿದೆ ಎಂದು ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಬಳಿಕ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಬಿಳಿನೆಲೆ CHO ಪಲ್ಲವಿ, ಸುಂಕದಕಟ್ಟೆ CHO ಸ್ವಾತಿ, ಕೊಣಾಜೆಯ CHO ರಂಜಿತ ,ಆರೋಗ್ಯ ಸಹಾಯಕಿ ಮಾಲತಿ, ಆಶಾಕಾರ್ಯಕರ್ತೆ ದಿವ್ಯಾ ಮತ್ತು SDMC ಅಧ್ಯಕ್ಷ ಯಶೋಧರ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯಗುರುಗಳಾದ ಸುನಂದ ಬಿ ಸ್ವಾಗತಿಸಿ, ಯೋಗಶಿಕ್ಷಕ ವಿಜೇಶ್ ಧನ್ಯವಾದ ಅರ್ಪಿಸಿದರು.