ಪುತ್ತೂರು ಉಪನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ- ಉದ್ಘಾಟನೆ

0

ಹೊಸ ತಂತ್ರಾಂಶದಲ್ಲಿ ಎಲ್ಲಾ ಅಡೆತಡೆಗಳನ್ನು ಸರಿಪಡಿಸಲಾಗಿದೆ – ದ.ಕ ಜಿಲ್ಲಾ ನೋಂದಣಾಧಿಕಾರಿ ಸೈಯದ್ ಪಾಶ

ಪುತ್ತೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರಳೀಕೃತ ಮಾಡುವ ನಿಟ್ಟಿನಲ್ಲಿ ಕಾವೇರಿ 2.0 ತಂತ್ರಾಂಶ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದ್ದು, ಜೂ.22ರಂದು ತಾಲೂಕು ಆಡಳಿತ ಸೌಧದಲ್ಲಿರುವ ಉಪನೋಂದಣಿ ಕಚೇರಿಯಲ್ಲೂ ಅನುಷ್ಠಾನ ಕಾರ್ಯಕ್ರಮ ನಡೆಯಿತು. ರಾಜ್ಯದಲ್ಲಿ 254 ನೇ ಕಚೇರಿಯಾದ ಪುತ್ತೂರಿನಲ್ಲಿ ಜಿಲ್ಲಾ ನೋಂದಣಾಧಿಕಾರಿ ಸೈಯದ್ ಪಾಶ ಕಾವೇರಿ ತಂತ್ರಾಂಶ 2.0 ಅನ್ನು ಉದ್ಘಾಟಿಸಿ ಚಾಲನೆ ನೀಡಿದರು.


ಹೊಸ ತಂತ್ರಾಂಶದಲ್ಲಿ ಎಲ್ಲಾ ಅಡೆತಡೆಗಳನ್ನು ಸರಿಪಡಿಸಲಾಗಿದೆ:
ನೂತನ ತಂತ್ರಾಂಶವನ್ನು ಉದ್ಘಾಟಿಸಿ ಪ್ರಥಮ ನೋಂದಣಿ ಪತ್ರವನ್ನು ವಿತರಣೆ ಮಾಡಿದ ಜಿಲ್ಲಾ ನೋಂದಣಾಧಿಕಾರಿ ಸೈಯದ್ ಪಾಶ ಅವರು ಮಾತನಾಡಿ 2003ರಲ್ಲಿ ಅಪ್‌ಡೇಟ್ ಆದ ಕಾವೇರಿ ತಂತ್ರಾಂಶದಲ್ಲಿ ನಿರಂತರ ಸಾವಿರಾರು ದಸ್ತಾವೇಜುಗಳನ್ನು ನೋಂದಾಣಿ ಮಾಡಿದ್ದೇವೆ. ಆದರೆ 2023ರಲ್ಲಿ ಅದನ್ನು ನಿರ್ವಹಣೆ ಮಾಡುವುದು ತುಂಬಾ ಕಷ್ಟ. ಹಳೆ ತಂತ್ರಜ್ಞಾನದ ಬದಲು ಇವತ್ತಿನ ಕಾಲದ ತಂತ್ರಜ್ಞಾನದಲ್ಲಿ ಕಾವೇರಿ 2.0 ರದಲ್ಲಿ ಉಪನೋಂದಣ ಕಚೇರಿ ಸಿಬ್ಬಂದಿ, ವಕೀಲರು, ದಸ್ತಾವೇಜು ಬರಹಗಾರರು, ಸಾರ್ವಜನಿಕರಿರಬಹುದು ಇವರೆಲ್ಲರಿಗೂ ಅನುಕೂಲವಾಗುವಂತೆ ಈ ತಂತ್ರಾಂಶ ಮಾಡಲಾಗಿದೆ. ಕಾವೇರಿ 2.0 ಮೂಲಕ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಬ್ಮಿಟ್ ಮಾಡಬಹುದು. ಉಪನೋಂದಣಾಧಿಕಾರಿ ಆನ್ ಲೈನ್ ನಲ್ಲೇ ದಾಖಲಾತಿ ಪರಿಶೀಲನೆ ಮಾಡುತ್ತಾರೆ. ನೋಂದಣಿ ಮಾಡುವವರು ತಮಗೆ ಬೇಕಾದ ಸಮಯದಲ್ಲಿ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಲು ಅವಕಾಶ ಇದೆ. ಹತ್ತರಿಂದ ಹದಿನೈದು ನಿಮಿಷನಲ್ಲಿ ನೋಂದಣಿ ಕಾರ್ಯ ಮುಗಿಸಲು ಅವಕಾಶ ಇದೆ. ಇದರ ಜೊತೆಗೆ ಪೇಮೆಂಟ್ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ, ಆನ್ ಲೈನ್ ಮೂಲಕ ಮಾಡಬಹುದು. ನೋಂದಣಿ ಕಾರ್ಯಕ್ಕೆ ಕಚೇರಿ ಬಂದು ತಂಬ್ ಕೊಡಲು ಮಾತ್ರ ಇರಲಿದೆ ಹೊರತು ಯಾವುದೇ ಪೀಸ್ ಪೇ ಮೆಂಟ್ ಕಚೇರಿಯಲ್ಲಿ ಇರುವುದಿಲ್ಲ. ಹೊಸ ತಂತ್ರಜ್ಞಾನದಲ್ಲಿ ಎಲ್ಲಾ ಅಡೆತಡಗಳನ್ನು ಸರಿಪಡಿಸಲಾಗಿದೆಯಾದರೂ ಮುಂದೆಯೂ ಕೆಲವೊಂದು ಸಮಸ್ಯೆ ಬರಬಹುದು. ಅದನ್ನು ಸರಿದೂಗಿಸಿಕೊಂಡು ಹೋಗುವ ತನಕ ಸಾರ್ವಜನಿಕರು ಸಹಕಾರ ನೀಡುವಂತೆ ಅವರು ವಿನಂತಿಸಿದರು.


ಸಮಯ ಬದಲಾವಣೆ ಮಾಡಬಹುದು:
ಅರ್ಜಿದಾರರು ತಮ್ಮ ನೋಂದಣೆ ಪ್ರಕ್ರಿಯೆ ಮುಗಿದ ಬಳಿಕ ಕಚೇರಿಗೆ ಬರುವ ಸಂದರ್ಭ ಯಾವ ದಿನವೆಂದು ನಿಗದಿ ಪಡಿಸಿ ಬರಬಹುದು. ಅಂದು ಬರಲಾಗದಿದ್ದರೆ ಬೇರೊಂದು ದಿನ ನಿಗದಿ ಪಡಿಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಜಿಲ್ಲಾ ನೋಂದಣಾಧಿಕಾರಿಯವರು ದಸ್ತಾವೇಜು ಬರಹಗಾರ ಶೇಖರ್‌ನಾರಾವಿ ಅವರ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಿಬ್ಬಂದಿ ಧನಂಜಯ, ಜೀತು ಥೋಮಸ್ ಅವರನ್ನು ಗೌರವಿಸಲಾಯಿತು. ಪುತ್ತೂರು ಪ್ರಭಾರ ಉಪನೋಂದಣಾಧಿಕಾರಿ ಸತ್ಯೇಶ್ ಪಿ ಸ್ವಾಗತಿಸಿದರು. ನೋಟರಿ ನ್ಯಾಯವಾದಿ ಶಿವಪ್ರಸಾದ್ ಇ ವಂದಿಸಿದರು. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕೆ, ಹಿರಿಯ ನ್ಯಾಯವಾದಿ ಗೋಪಾಲಕೃಷ್ಣ ಭಟ್, ಶಂಭು ಭಟ್, ಚಿದಾನಂದ ಬೈಲಾಡಿ, ನಿರ್ಮಲ್ ಕುಮಾರ್ ಜೈನ್, ಭಾಸ್ಕರ್ ಕೋಡಿಂಬಾಳ, ವಿರೂಪಾಕ್ಷ ಮಚ್ಚಿಮಲೆ, ಅರುಣ್ ಬಿ.ಕೆ, ಭಾಸ್ಕರ್ ಪೆರುವಾಯಿ, ದಸ್ತಾವೇಜು ಬರಹಗಾರರಾದ ಎ.ವಿ.ಕೃಷ್ಣ ಉಪಾಧ್ಯಾಯ, ಆರ್.ಕೆ.ಪಾಂಗಣ್ಣಾಯ, ಸೂರ್ಯನಾರಾಯಣ ಎಡಪಡಿತ್ತಾಯ, ಕಿರಣ್ ಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಶುಲ್ಕ ಪಾವತಿಯ ಸಮಸ್ಯೆ:
ಆಸ್ತಿಗಳ ನೋಂದಣಿಗೆ ಸಹಿತ ಇಸಿ ಅರ್ಜಿಗಾಗಿ ಆನ್‌ಲೈನ್ ಪೇಮೆಂಟ್ ಮಾಡಿದಾಗ ಬ್ಯಾಂಕ್ ಖಾತೆಯಿಂದ ಮೊತ್ತ ಕಡಿತವಾದರೂ ಖಜಾನೆ-2.0ಗೆ ತಲುಪಿರುವ ಮಾಹಿತಿ ಸಬ್ ರಿಜಿಸ್ಟಾರ್‌ಗೆ ಸಿಗುತ್ತಿಲ್ಲ. ಈ ಕುರಿತು ಪೇ ಮೆಂಟ್ ಆಗದ ಸಂದೇಶ ಅರ್ಜಿದಾರರಿಗೆ ಬರುತ್ತದೆ. ಪರಿಣಾಮ ಪದೇಪದೆ ಶುಲ್ಕ ಪಾವತಿಸುವಂತೆ ಆನ್‌ಲೈನ್‌ನಲ್ಲಿ ತೋರಿಸುತ್ತಿದೆ. ಇದರಿಂದ ಸಾರ್ವಜನಿಕರು ನೋಂದಣೆ ಕಚೇರಿ, ದಸ್ತಾವೇಜು ಬರಹಗಾರರು, ಸೈಬರ್ ಸೆಂಟರ್‌ಗಳಿಗೆ ಅಲೆದಾಡುವಂತಾಗಿದೆ ಎಂಬ ಅರ್ಜಿದಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ನೋಂದಣಾಧಿಕಾರಿಯವರು ಈಗಾಗಲೇ ಹೊಸ ತಂತ್ರಜ್ಞಾನ ಬಂದಿದೆ. ಆನ್‌ಲೈನ್ ಪೇ ಮೆಂಟ್ ಮಾಡುವಾಗ ಬ್ಯಾಂಕ್ ಖಾತೆ ಮತ್ತು ತಂತ್ರಾಂಶ ಕಾವೇರಿ 2 ಇವೆರಡರ ನೆಟ್‌ವರ್ಕ್ ಮಧ್ಯೆ ಕಡಿತವಾದರೆ ಈ ಸಮಸ್ಯೆ ಬರುತ್ತದೆ. ನೆಟ್‌ವರ್ಕ್ ಸರಿಯಾಗಿರಬೇಕೆಂದರು. ಇದೇ ಸಂದರ್ಭ ಚೆನಲ್ ಕಟ್ಟುವ ಸಂದರ್ಭದ ಕೆಲವು ಬದಲಾವಣೆಗಳ ಕುರಿತು ನ್ಯಾಯವಾದಿ ವಿರೂಪಾಕ್ಷ ಮಚ್ಚಿಮಲೆ, ದಸ್ತಾವೇಜು ಬರಹಗಾರ ಕಿರಣ್ ಸಹಿತ ಹಲವಾರು ಮಂದಿ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here