ಪುತ್ತೂರು: ನಗರ ಸಭಾ ವ್ಯಾಪ್ತಿಯ ಮಚ್ಚಿಮಲೆ ಬೊಳ್ಳಾಣ ಎಂಬಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಯ ನೀರು ಮೊಣಕಾಲು ಬಾಗದಷ್ಟು ರಸ್ತೆಯಲ್ಲಿಯೇ ನಿಂತು ವಾಹನ ಪಾದಾಚಾರಿಗಳು ಹಾಗೂ ಸವಾರರು ಸಂಚರಿಸಲು ಪರದಾಡುವಂತಾಗಿದೆ.
ನಗರ ಸಭೆಯ ವತಿಯಿಂದ ಬೊಳ್ಳಾಣ ರಸ್ತೆಯ ಇಳಿಜಾರು ಪ್ರದೇಶಕ್ಕೆ ಇಂಟರ್‌ಲಾಕ್ ಹಾಗೂ ಕೆಲಭಾಗದಲ್ಲಿ ರಸ್ತೆಗೆ ಕಾಂಕ್ರಿಟೀಕರಣಗೊಂಡಿದೆ. ಈ ರಸ್ತೆಯ ಇಕ್ಕೆಲಗಳಲ್ಲಿಯೂ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಯ ನೀರು ರಸ್ತೆಯಲ್ಲಿ ನಿಂತು ತೋಡಿನಂತಾಗಿದೆ. ಈ ಭಾಗದ ಸುಮಾರು ಎಂಟು ಮನೆಗಳ ನಿವಾಸಿಗಳು ಇದೇ ರಸ್ತೆ ಮೂಲಕವೇ ಸಂಚರಿಸಬೇಕಾಗಿದ್ದು ನಿತ್ಯ ಪರದಾಡುವಂತಾಗಿದೆ. ವಾಹನ ಸವಾರರಿಗೆ, ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಂಚಾರಕ್ಕೆ ಕಷ್ಟವಾಗುತ್ತಿದೆ. ಸಂಬಂಧಪಟ್ಟ ಇಲಾಖಾಧಿಕಾರಿ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.