ವಿಟ್ಲದ ವೆಸ್ಟ್ ಕೋಸ್ಟ್ ಹೀರೋದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ಬಿಡುಗಡೆ

0

ವಿಟ್ಲ: ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಜಿಲ್ಲೆಯಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಮೋಟರ್ಸ್‌ನ ವಿಟ್ಲ ಶಾಖೆಯಲ್ಲಿ ನೂತನ ಮಾದರಿಯ ಪ್ಯಾಷನ್ ಪ್ಲಸ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.


ವಿಟ್ಲದ ಬೈಕ್ ಪಾಯಿಂಟ್ ಗ್ಯಾರೇಜ್ ಮಾಲಕರಾದ ಮೋಹನ್ ಕುಮಾರ್ ಹಾಗೂ ವಿಟ್ಲದ ಲಿಯೋ ಗ್ಯಾರೇಜ್‌ನ ಮಾಲಕರಾದ ಲಿಯೋರವರು ನೂತನ ಪ್ಯಾಷನ್ ಪ್ಲಸ್ ಬೈಕ್ ಅನ್ನು ಬಿಡುಗಡೆಗೊಳಿಸಿದರು. ಬಳಿಕ ಪ್ಯಾಷನ್ ಪ್ಲಸ್ ಬೈಕ್‌ನ ಪ್ರಥಮ ಗ್ರಾಹಕರಿಗೆ ಅತಿಥಿಗಳು ಕೀ ಹಸ್ತಾಂತರ ಮಾಡಿದರು.
ಈ ಸಂದರ್ಭ ವೆಸ್ಟ್ ಕೋಸ್ಟ್ ಮೋಟಾರ್ಸ್ ಆಡಳಿತ ನಿರ್ದೇಶಕರಾದ ಮಹಮ್ಮದ್ ರಫೀಕ್ ಹಾಗೂಎಂ ಸಂದೀಪ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here