ಪುತ್ತೂರು: ಕನ್ಯಾನ ಗ್ರಾಮ ನಿವಾಸಿ ಪೇಪರ್ ವಿತರಕ ಗಂಗಾಧರ ಎಂಬವರ ಮನೆಯ ದಾಸ್ತಾನು ಕೊಠಡಿಗೆ ಜು.2ರ ತಡರಾತ್ರಿ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ರಾತ್ರಿ ಸುಮಾರು 1.30ರ ವೇಳೆಗೆ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿದ್ದು, ಕೊಠಡಿಯಲ್ಲಿದ್ದ ಕಟ್ಟಿಗೆ, ತೆಂಗಿನಕಾಯಿ, ಹಲಗೆಗಳು ಹಾಗೂ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿ ತೀವ್ರತೆಗೆ ಕೊಟ್ಟಿಗೆಯ ಛಾವಣಿ, ಗೋಡೆ ಕುಸಿದು ಬಿದ್ದಿದ್ದು ಹೆಚ್ಚಿನ ಪ್ರಮಾಣದ ಹಾನಿ ಮತ್ತು ನಷ್ಟ ಉಂಟಾಗಿದೆ. ದಾಸ್ತಾನು ಕೊಠಡಿಯ ಸಮೀಪದಲ್ಲೇ ಹಲವಾರು ಮನೆಗಳಿದ್ದರೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ತುರ್ತು ಸ್ಪಂದನೆಯಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು.