ಈಶ್ವರಮಂಗಲ ಟೈಲರ್ಸ್ ಮಹಾಸಭೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳೂರು ಇದರ ಪುತ್ತೂರು ಕ್ಷೇತ್ರ ಸಮಿತಿಯ ಈಶ್ವರಮಂಗಲ ವಲಯದ ಮಹಾಸಭೆಯುಈಶ್ವರಮಂಗಲದ ಕಾರಂತ ಬಿಲ್ಡಿಂಗ್ ನ ಸಭಾಂಗಣದಲ್ಲಿ ಜು.2ರಂದು ನಡೆಯಿತು.


ವಲಯದ ಅಧ್ಯಕ್ಷೆ ರೇವತಿ ಸಿ ಎನ್.ಕಾವು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ್ ಬಿ.ಎನ್.ಭಾಗವಹಿಸಿ ಸೂಕ್ತ ಮಾಹಿತಿಯನ್ನು ನೀಡಿದರು.ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಸೀತರಾಮ ಗೌಡ,ಕಾರ್ಯದರ್ಶಿ ಗಣೇಶ್ ಈಶ್ವರಮಂಗಲ,ಕೋಶಧಿಕಾರಿ ವೆಂಕಪ್ಪ ನಾಯ್ಕ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಕಾಲ ವಲಯಾಧ್ಯಕ್ಷರನ್ನಾಗಿ ರೇವತಿ ಸಿ.ಎನ್ ಕಾವು,ಕಾರ್ಯದರ್ಶಿ ಯಾಗಿ ಗಣೇಶ್ ಈಶ್ವರಮಂಗಲ ಮತ್ತು ಕೋಶಾಧಿಕಾರಿಯಾಗಿ ವೆಂಕಪ್ಪ ನಾಯ್ಕ ಈಶ್ವರಮಂಗಲ ಮರು ಆಯ್ಕೆಗೊಂಡರು.ಕ್ಷೇತ್ರ ಸಮಿತಿಗೆ ಸೀತಾರಾಮ ಗೌಡ,ಚಿತ್ರಾ ಕಾವು,ಶ್ರುತಿ ಸುಳ್ಯಪದವು,ಸುಜಾತಾ ಸುಳ್ಯಪವು ಆಯ್ಕೆಯಾದರು.
ಮೈನಾ ಆಚಾರ್ಯ ಪ್ರಾರ್ಥನೆಗೈದು, ಗಣೇಶ್ ಸ್ವಾಗತಿಸಿ ವರದಿ ವಾಚಿಸಿದರು.ವೆಂಕಪ್ಪ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here