ಮುಖ್ಯ ಮಂತ್ರಿ ಗುರುಕಿರಣ್,ಉಪ ಮುಖ್ಯಮಂತ್ರಿ ಚಾಂದಿನಿ.
ನಿಡ್ಪಳ್ಳಿ; ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇದರ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಓನ್ ಲೈನ್ ಇವಿಎಂ ಬಳಸಿ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.ಮುಖ್ಯ ಮಂತ್ರಿಯಾಗಿ ಹತ್ತನೆ ತರಗತಿಯ ಗುರುಕಿರಣ್ ಹಾಗೂ ಉಪ ಮುಖ್ಯ ಮಂತ್ರಿಯಾಗಿ 9 ನೇ ತರಗತಿಯ ಚಾಂದಿನಿ ಆಯ್ಕೆಯಾದರು.
ಗೃಹ ಮಂತ್ರಿಯಾಗಿ ಅವಿನಾಶ್, ಚೈತ್ರೇಶ್, ವಿದ್ಯಾ ಮಂತ್ರಿಯಾಗಿ ಆಯಿಷತ್ ಸಹಲಾ, ಸ್ವಾತಿ, ಕ್ರೀಡಾ ಮಂತ್ರಿಯಾಗಿ ರಿತಾಶ್ರೀ, ಕಾವ್ಯ, ಆರೋಗ್ಯ ಮಂತ್ರಿಯಾಗಿ ಅಂಕಿತಾ, ಸುಪ್ರೀತಾ, ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತಾ, ಧನ್ಯಶ್ರೀ, ಚಂದ್ರಿಕಾ, ನೀರಾವರಿ ಮಂತ್ರಿಯಾಗಿ ಅಕ್ಷಿತ್,ಹರೀಶ್, ಆಹಾರ ಮಂತ್ರಿಯಾಗಿ ಧನ್ಯಶ್ರೀ, ವೈಷ್ಣವಿ, ಕೃಷಿ ಮಂತ್ರಿಯಾಗಿ ಆಕಾಶ್, ಲೋಹಿತ್, ರಕ್ಷಣಾ ಮಂತ್ರಿಯಾಗಿ ಮನೀಷ್ ರೈ, ರೋಹಿತ್, ಸಮಯ ಪಾಲನಾ ಮಂತ್ರಿಯಾಗಿ ನಿಕ್ಷಿತ್, ಅನನ್ಯ,ಸ್ವಚ್ಚತಾ ಮಂತ್ರಿಯಾಗಿ ಮುಫಿದಾ, ಸ್ವಾಲಿಹಾ, ಶೃತಿ, ಚೈತನ್ಯ, ಶಿಸ್ತು ಮಂತ್ರಿಯಾಗಿ ಭವ್ಯಶ್ರೀ, ರಕ್ಷಿತಾ, ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ಮುನವೀರಾ ಮತ್ತು ಸದಸ್ಯರಾಗಿ ಹೇಮಂತ್, ತ್ರಿಶಾಂತ್, ರಕ್ಷಿತ್, ಜೀವನ್ ಹಾಗೂ ಸ್ಪೀಕರ್ ಆಗಿ ದೀಪಕ್ ರಾಜ್ ಇವರನ್ನು ಆರಿಸಲಾಯಿತು.ಮುಖ್ಯ ಗುರು ವಿಜಯ ಕುಮಾರ್ ಇವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಹಶಿಕ್ಷಕಿಯರು ಸಹಕರಿಸಿದರು.