ನಿಡ್ಪಳ್ಳಿ: ಮುಳುಗು ಸೇತುವೆ ಎಂದು ಖ್ಯಾತಿ ಪಡೆದಿರುವ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆಲ್ಯಡ್ಕ ಸೇತುವೆ ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಜು.6ರಂದು ಬೆಳಿಗ್ಗೆ ಸಂಪೂರ್ಣ ಮುಳುಗಡೆಯಾಗಿದ್ದು ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಜು.5 ರ ರಾತ್ರಿಯಿಂದ ಸುರಿದ ಬಾರಿ ಮಳೆಗೆ ಜೂ.6ರಂದು ಬೆಳಿಗ್ಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಾರ್ವಜನಿಕರಿಗೆ ಸಂಚರಿಸಲು ತೀವ್ರ ಸಮಸ್ಯೆ ಉಂಟಾಯಿತು. ಇಲ್ಲಿ ಚಲಿಸುವ ಖಾಸಗಿ ಬಸ್ಸುಗಳು ಸಂಟ್ಯಾರ್ ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಾಯಿತು. ಬಸ್ಸು ಇಲ್ಲದೆ ಈ ರಸ್ತೆಯಲ್ಲಿ ಬೆಳಿಗ್ಗೆ ತಮ್ಮ ಕಾರ್ಯ ಚಟುವಟಿಕೆಗಳಿಗೆ ತೆರಳುವವರಿಗೆ ಬಹಳ ಸಮಸ್ಯೆ ಉಂಟಾಯಿತು.ಗುಮ್ಮಟಗದ್ದೆ, ದೇವಸ್ಯ ಭಾಗದವರು ಸುತ್ತಿ ಬಳಸಿ ಹೋಗುವಂತಾಯಿತು.