ಸವಣೂರು ಗ್ರಾ.ಪಂ.ಸದಸ್ಯ ಬಾಬು ಎನ್ ಅವರಿಗೆ ಮಾತೃವಿಯೋಗ 

0

ಸವಣೂರು : ಪುಣ್ಚಪ್ಪಾಡಿ ಗ್ರಾಮದ ನೆಕ್ಕರೆ ನಿವಾಸಿ ದಿ.ಮುದ್ದ  ಎಂಬವರ ಪತ್ನಿ ಲಕ್ಷ್ಮೀ  ಅವರು ಅಲ್ಪಕಾಲದ ಅಸೌಖ್ಯದಿಂದ ಜು.6ರಂದು ನಿಧನರಾದರು.ಮೃತರು ಮಕ್ಕಳಾದ ಸವಣೂರು ಗ್ರಾಮ ಪಂಚಾಯತ್ ಸದಸ್ಯ, ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ಉಪಾಧ್ಯಕ್ಷ ಬಾಬು ಎನ್ ಸವಣೂರು , ಬಾಲಕ್ಕ,ಭಾಗೀರಥಿ ಅವರನ್ನು ಅಗಲಿದ್ದಾರೆ.

ಮೃತರ ಮನೆಗೆ ಸವಣೂರು ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ,ರಫೀಕ್ ಎಂ.ಎ.,ಅಭಿವೃದ್ದಿ ಅಧಿಕಾರಿ ಎ.ಮನ್ಮಥ,ಪ್ರಮುಖರಾದ ಅಬ್ದುಲ್ ರಹಮಾನ್ ತಂಬಿನಮಕ್ಕಿ,ಉಮ್ಮರ್ ಸೋಂಪಾಡಿ ,ಗಫೂರ್ ಹಾಜಿ ,ರಫೀಕ್ ಸೋಂಪಾಡಿ ,ಇಕ್ಬಾಲ್ ಕೆನರ,ಸಮೀರ್ ಯಾತ್ರ ಟ್ರಾನ್ಸ್ ಪೋರ್ಟ್ ,ಉದ್ಯಮಿಗಳಾದ ವಿಠಲ ರೈ,ಮಂಜುನಾಥ ಪ್ರಸಾದ್ ಮೊದಲಾದವರು ಭೇಟಿ ನೀಡಿದರು.

ಎಸ್.ಡಿ.ಪಿಐ.ಸಂತಾಪ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಹಾಗೂ ಸವಣೂರು ಗ್ರಾಮ ಪಂಚಾಯತಿ ಸದಸ್ಯ ಬಾಬು ಎನ್ ಸವಣೂರು ರವರ ತಾಯಿ ಲಕ್ಷ್ಮಿ ಅವರ ನಿಧನಕ್ಕೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಎಸ್.ಡಿ.ಪಿ.ಐ ಸುಳ್ಯ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಫೀಕ್ ಎಂ.ಎ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here