ಗೌರವಾಧ್ಯಕ್ಷ ಡಾ| ಸುರೇಶ್ ಪುತ್ತೂರಾಯ, ಅಧ್ಯಕ್ಷ: ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರ.ಕಾರ್ಯದರ್ಶಿ: ನವೀನ್ ಕುಲಾಲ್
ಶ್ರೀಧಾಮದಲ್ಲಿ ಜು.16ರಿಂದ ಆ.25ರವರೆಗೆ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಹಾಗೂ ಆ.25ರಿಂದ ಆ. 27ರವರೆಗೆ
ಶ್ರೀವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬದ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು: ಶ್ರೀಧಾಮ ಮಾಣಿಲ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯಲಿರುವ ಶ್ರೀವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಪ್ರಯುಕ್ತ ಪುತ್ತೂರು ವಲಯ ಸಮಿತಿ ರಚನೆ ನಡೆಸಲಾಯಿತು.
ಗೌರವಾಧ್ಯಕ್ಷರಾಗಿ ಜನಪ್ರಿಯ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಅಧ್ಯಕ್ಷರಾಗಿ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಗೌರವ ಮಾರ್ಗದರ್ಶಕರಾಗಿ ಜನಪ್ರಿಯ ವೈದ್ಯ ಡಾ.ಎಂ.ಕೆ ಪ್ರಸಾದ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಟಿ. ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ಶಶಾಂಕ್ ಕೊಟೇಚಾ, ಡಾ| ಕೃಷ್ಣ ಪ್ರಸನ್ನರವರನ್ನು ಆಯ್ಕೆ ಮಾಡಲಾಯಿತು. ಕಾರ್‍ಯಾಧ್ಯಕ್ಷರಾಗಿ ಲಕ್ಷ್ಮಣ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಲಾಲ್ ಪುತ್ತೂರುರವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಶ್ರೀಧರ್ ತೆಂಕಿಲ, ಜಯಂತ್ ಕುಂಜೂರು ಪಂಜ, ಹರೀಶ್ ಕುಮಾರ್ ದೋಳ್ಪಾಡಿ, ತಿಲಕ್‌ರಾಜ್ ಕುರುಂಬಾರು, ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ದಿನೇಶ್‌ಕುಮಾರ್ ಜೈನ್, ಧನ್ಯಕುಮಾರ್ ಬೆಳಂದೂರು, ದಿನೇಶ್ ಪಂಜಿಗ, ಉಪಾಧ್ಯಕ್ಷರಾಗಿ ಕೃಷ್ಣ ಎಂ. ಅಳಿಕೆ, ರಾಜೇಶ್ ಬನ್ನೂರು, ಪದ್ಮನಾಭ ಶೆಟ್ಟಿ, ಲಕ್ಷ್ಮಣ ಕರಂದ್ಲಾಜೆ, ಜಯಂತ ನಡುಬೈಲು, ಭಾಮಿ ಅಶೋಕ್ ಶೆಣೈ, ಸಂತೋಷ್ ಕುಮಾರ್ ರೈ ಕೈಕಾರ, ದಿನೇಶ್ ಮೆದು, ಹರಿಣಿ ಪುತ್ತೂರಾಯ, ನಯನ ರೈ, ಹರಿಣಾಕ್ಷಿ ಜಗದೀಶ್ ಶೆಟ್ಟಿ, ವಿದ್ಯಾಗೌರಿ, ಶಾರದಾ ಕೇಶವ, ಸುಮಂಗಲ ಶೆಣೈರವರುಗಳನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಸತೀಶ್ ಬಿ.ಎಸ್, ಮತ್ತು ಜನಾದನ ಸಾರ್ಯ, ಸದಸ್ಯರಾಗಿ ಜನಾರ್ದನ ಸಿಟೆಗುಡ್ಡೆ, ಹರೀಶ್ ಕೊಡಿಪ್ಪಾಡಿ, ಮನ್ಮಥ ಶೆಟ್ಟಿ, ಜಯಪ್ರಸಾದ ಮುಂಡೂರು, ಸುಧಾಕರ ಕುಲಾಲ್, ಯೋಗೀಶ್ ಬಲ್ನಾಡು, ಅಜಿತ್ ಕೆಯ್ಯೂರು, ಡಾ| ಚಂದ್ರಶೇಖರ, ತುಕಾರಾಮ್ ಮುದಲಾಜೆ, ಸತೀಶ್ ಉಡ್ಡಂಗಲ, ಮಹೇಶ್ ಕೆ. ಸವಣೂರು, ರವಿಕುಮಾರ್ ಕೈತಡ್ಕರವರನ್ನು ಆಯ್ಕೆ ಮಾಡಲಾಯಿತು.
ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಹಾಗು ಶ್ಯಾಮ ಸುದರ್ಶನ ಭಟ್ ಹೊಸಮೂಲೆರವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಪುತ್ತೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ. ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾಧಿಕಾರಿ ಕಿರಣ್‌ರವರನ್ನು ಆಯ್ಕೆ ಮಾಡಲಾಯಿತು. ಪ್ರಚಾರ ಸಮಿತಿ ಸದಸ್ಯರಾಗಿ ಲೋಕೇಶ್ ಬನ್ನೂರು ಮತ್ತು ಶರತ್ ಕುಮಾರ್ ಪಾರರವರನ್ನು ಆಯ್ಕೆ ಮಾಡಲಾಯಿತು.