ಸಿಬ್ಬಂದಿಗಳ ಕೊರತೆ, ಕಾಮಗಾರಿ ವಿಳಂಬ, ಬಾರದ ಅನುದಾನ,ಮುಗಿಯದ ಜಲಸಿರಿ ಕಾಮಗಾರಿ – ಸಮಸ್ಯೆಗಳ ಸರಮಾಲೆಯನ್ನೇ ಡಿ.ಸಿ ಮುಂದಿಟ್ಟ ನಗರಸಭಾ ಸದಸ್ಯರು

0

ಪ್ರಕೃತಿ ವಿಕೋಪಕ್ಕೆ ಸಿದ್ದತೆ, ಫಲಾನುಭವಿಗಳಿಗೆ ಅನುದಾನ ಇಲಾಖಾಧಿಕಾರಿಗಳ ಜಂಟಿ ಸಭೆ ನಡೆಸಲು ಸೂಚನೆ ನೀಡಿದ ಡಿ.ಸಿ

ಸಿಬ್ಬಂದಿ, ಅಧಿಕಾರಿಗಳ ಕೊರತೆಯನ್ನು ನೀಗಿಸಲು ಪ್ರಯತ್ನ ಪಡುವೆ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಪುತ್ತೂರು:ಪ್ರಕೃತಿ ವಿಕೋಪಕ್ಕೆ ಎಲ್ಲಾ ಸಿದ್ದತೆ ಮತ್ತು ಫಲಾನುಭವಿಗಳಿಗೆ ಅನುದಾನ ನೀಡಲು ಅವರ ದಾಖಲೆಗಳನ್ನು ನಗರಸಭೆ, ಕಂದಾಯ ಇಲಾಖೆ ಜಂಟಿಯಾಗಿ ಕೂತು ಸಭೆ ನಡೆಸಿ ಪರಿಹರಿಸುವಂತೆ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಜಿಲ್ಲಾಧಿಕಾರು ಸೂಚನೆ ನೀಡಿದ ಘಟನೆ ಜು.14ರಂದು ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಕಾರ್ಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತುರ್ತು ಆಗಬೇಕಾದ ಕಾರ್ಯಗಳ ಕುರಿತು ನಗರಸಭೆಯ ಪ್ರಗತಿ ಪರಿಶೀಲನಾ ಸಭೆ ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ನಡೆಯಿತು.

ಸಭೆಯಲ್ಲಿ ಪುತ್ತೂರು ನಗರಸಭೆಯಲ್ಲಿ ಅಭಿವೃದ್ಧಿಗೆ ಸಿಬ್ಬಂದಿಗಳ ಕೊರತೆಯಿದೆ. ಬಹುತೇಕ ಅಧಿಕಾರಿಗಳನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ. ಅಮೃತ ನಗರೋತ್ಥಾನದ ಗುತ್ತಿಗೆದಾರರೊಬ್ಬರ ಸಮಸ್ಯೆಯಿಂದ ಕಾಮಗಾರಿಗಳು ವಿಳಂಬವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ. ಜಲಸಿರಿಯ ಕಾಮಗಾರಿ ಇನ್ನೂ ಮುಗಿದಿಲ್ಲ, ಪ್ರಾಕೃತಿಕ ವಿಕೋಪಕ್ಕೂ ಟಾಸ್ಕ್ ಪೋರ್ಸ್ ಸಭೆ ನಡೆಸಿಲ್ಲ. ವಾರ್ಡ್‌ಗೆ ಸಂಬಂಧಿಸಿ ತಂಡ ರಚನೆಯನ್ನು ಮಾಡಿಲ್ಲ ಎಂದು ನಗರಸಭೆ ಸದಸ್ಯರು ಪ್ರಸ್ತುತ ನಗರಸಭೆ ಆಡಳಿತಾಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಲ್ಲಿ ಪ್ರಸ್ತಾಪಿಸಿದ್ದಾರೆ.

ನಗರಸಭೆ ಸದಸ್ಯರಾದ ಶಕ್ತಿ ಸಿನ್ಹ, ಶೈಲಾ ಪೈ, ಸಂತೋಷ್ ಬೊಳುವಾರು, ಸುಂದರ ಪೂಜಾರಿ, ಪಿ.ಜಿ.ಜಗನ್ನಿವಾಸ ರಾವ್, ಪದ್ಮನಾಭ ನಾಯ್ಕ್, ಮನೋಹರ್ ಕಲ್ಲಾರೆ, ಬಾಲಚಂದ್ರ, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ಮಾತನಾಡಿದರು. ಜಿಲ್ಲಾಧಿಕಾರಿಯವರು ಉತ್ತರಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭೀದ ಗದ್ಯಾಳ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಪುರಂದರ್ ಕೆ.ಎಮ್, ಐಎಎಸ್ ಪ್ರೊಬೇಷನರಿ ಅಧಿಕಾರಿ ಮುಕುಂದ ಜೈನ್, ಸಹಾಯಕ ಕಮೀಷನರ್ ಮಹೇಶ್ಚಂದ್ರ, ತಹಶೀಲ್ದಾರ್ ಶಿವಶಂಕರ್, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here