ವಿವೇಕಾನಂದ ಕಾಲೇಜಿನ ಉಪನ್ಯಾಸಕ ಲೆ.ಭಾಮಿ ಅತುಲ್ ಶೆಣೈರಿಗೆ ಮುಖ್ಯಮಂತ್ರಿಯಿಂದ ಪ್ರಶಂಸನಾ ಪತ್ರ

0

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ರಾಷ್ಟೀಯ ಸೇನಾ ಯೋಜನೆಯ (ಎನ್‌ಸಿಸಿ) ಯ ಅಧಿಕಾರಿ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಅವರಿಗೆ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.


ಮಡಿಕೇರಿ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಝೆಡ್.ಜಿ.ಅರ್ಹನ ಹಾಗೂ ಆಡಳಿತಾಧಿಕಾರಿ ಕರ್ನಲ್ ವಿ ಡಿ ಚಾಕೋ ಅವರು ಈ ಗೌರವ ಪತ್ರವನ್ನು ಮಡಿಕೇರಿ ಬೆಟಾಲಿಯನ್ ನಲ್ಲಿ ನೀಡಿ ಗೌರವಿಸಲಾಯಿತು.ಭಾಮಿ ಅತುಲ್ ಶೆಣೈ ಅವರು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ಉಪನ್ಯಾಸಕೇತರ ವರ್ಗದವರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here