





ಪುತ್ತೂರು: ಎಸ್.ಪಿ.ವೈ.ಎಸ್.ಎಸ್.ನ ಬೆಟ್ಟoಪಾಡಿ ಶಾಖೆಯ ಮಾತೃ ಪೂಜನಾ, ಮಾತೃ ಧ್ಯಾನ ಮತ್ತು ಮಾತೃ ಭೋಜನ ಕಾರ್ಯಕ್ರಮ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.


ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸಹ ಸಂಚಾಲಕಿ ಕನಕ ಮಾತನಾಡಿ, ತಾಯಿ ಹೃದಯದ ಅಂತಕರಣದ ವಿವಿಧ ಸ್ತರಗಳನ್ನು ತಿಳಿಸಿದರು. ತಾಯಿ ಮತ್ತು ನಮ್ಮ ರಕ್ತ ಸಂಬಂಧವನ್ನು ಮತ್ತೆ ಹಸಿರಾಗಿ ಉಸಿರಿನಲ್ಲಿ ಇರುವುದನ್ನು ಅರಿವಿಗೆ ತಂದರು.
ವೀಣಾ ಹೆಬ್ಬಾರ್ ಮಾತನಾಡಿ, ತಾಯಿ ಮತ್ತು ಮಕ್ಕಳ ಅವಿನಾಭಾವ ಸಂಬಂಧ ಮತ್ತು ಸಮಿತಿಯ ಇಂತಹ ಅರ್ಥಪೂರ್ಣ ಕಾರ್ಯಕ್ರಮದ ಅವಶ್ಯಕತೆಯ ಅರಿವನ್ನು ತಿಳಿಸಿದರು.






ಎಸ್.ಪಿ.ವೈ.ಎಸ್.ಎಸ್.ನ ನಮಿತಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಿಕ್ಷಣ ಪ್ರಮುಖ ಗಣೇಶ್ ಉಪಸ್ಥಿತರಿದ್ದರು.
ನವೀನ್ ಮತ್ತು ಬಳಗ ಪ್ರಾರ್ಥಿಸಿದರು. ಪ್ರಣತಿ ಶ್ಲೋಕ ಹೇಳಿದರು. ಸುಮತಿ ಸ್ವಾಗತಿಸಿದರು. ಸುಮನಾ ವರದಿ ವಾಚಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು.







