ಕೊಣಾಲು ಶಾಲಾ ದೈ.ಶಿ.ಶಿಕ್ಷಕ ರಾಮಣ್ಣ ಬಿ. ಹಳೆನೇರೆಂಕಿ ಶಾಲೆಗೆ ವರ್ಗಾವಣೆ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಣ್ಣ ಬಿ.ಅವರು ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ರಾಮಣ್ಣ ಬಿ.,ಅವರು ಕಳೆದ 12 ವರ್ಷಗಳಿಂದ ಕೊಣಾಲು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಮಣ್ಣ ಅವರಿಂದ ತರಬೇತು ಪಡೆದುಕೊಂಡ ವಿದ್ಯಾರ್ಥಿಗಳು ವಲಯ, ತಾಲೂಕು, ಜಿಲ್ಲೆ, ಅಂತರ್‌ಜಿಲ್ಲಾಮಟ್ಟದ ಪಂದ್ಯಾಟ ಹಾಗೂ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಮಣ್ಣ ಅವರು ಜು.20ರಂದು ಹಳೆನೇರೆಂಕಿ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here