ಜು.23: ಲಯನ್ಸ್ ಕ್ಲಬ್ ಪುತ್ತೂರು – ಪಾಣಾಜೆ ಪದಗ್ರಹಣ ಸಮಾರಂಭ – ಸ್ಥಾಪಕರ ದಿನಾಚರಣೆ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಜು.23ರಂದು ಬೆಳಿಗ್ಗೆ ಗಂಟೆ 9-30ಕ್ಕೆ ಸರಿಯಾಗಿ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.

317ಡಿ ಜಿಲ್ಲೆ ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರಾದ ಲ|ಕುಡ್ಪಿ ಅರವಿಂದ ಶೆಣೈ ಪಿಎಂಜೆಎಫ್ ಅವರು ಪದಗ್ರಹಣ ನಡೆಸಿಕೊಡಲಿದ್ದು ಮಾಜಿ ಪ್ರಾಂತೀಯ ಅಧ್ಯಕ್ಷ ಲ|ಹೇಮನಾಥ ಶೆಟ್ಟಿ ಕಾವು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಅಧ್ಯಕ್ಷ ಲ| ಮಹಮ್ಮದ್ ಕುಕ್ಕುವಳ್ಳಿ, ಪ್ರ.ಕಾರ್ಯದರ್ಶಿ ಲ|ದಯಾನಂದ ರೈ ಕೋರ್ಮಂಡ ಹಾಗೂ ಕೋಶಾಧಿಕಾರಿ ಲ| ಪ್ರಕಾಶ್ ರೈ ಬೈಲಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here