ಪುತ್ತೂರು: ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿದ್ದು, ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟು ಹಾಕುತ್ತಿದ್ದು, ಇದೀಗ ಸಂಸ್ಥೆಯ ದಶಮಾನೋತ್ಸವಕ್ಕೆ ಚಾಲನೆ ನೀಡುವ ಜೊತೆಗೆ ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಗತಿಗಳನ್ನು ಜು.21ರಂದು ಉದ್ಘಾಟಿಸಲಾಯಿತು.
ಮಂಗಳೂರು ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ ಬಿ ಪುರಾಣಿಕ್ ಅವರು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.
ತಂತ್ರಾಂಶ ತಜ್ಞ, ಕಂಪ್ಯೂಟರ್ನಲ್ಲಿ ಕನ್ನಡ ಕೀಪ್ಯಾಡ್ ಅನ್ನು ಆವಿಷ್ಕರಿಸಿದ ಪ್ರೊ.ಕೆ.ಪಿ.ರಾವ್ ಅವರು ತೆಂಗಿನ ಅರಳಿಸಿದ ಬಳಿಕ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಗತಿಗಳಿಗೆ ಚಾಲನೆ ನೀಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದರು.
ಪುತ್ತೂರಿನ ಹಿರಿಯ ನ್ಯಾಯವಾದಿ ಮಹೇಶ್ ಕಜೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್, ಸುರೇಶ್ ಶೆಟ್ಟಿ ಬಾಲಕೃಷ್ಣ ಬೋರ್ಕರ್, ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್,
ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕಮ್ಮಾಜೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ನ್ಯಾಯವಾದಿ ಸೀಮಾ ನಾಗರಾಜ್, ಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ತಲೆಮಾರಿಗೆ ಕೊಡುವ ಪ್ರಯತ್ನ ಶುಭವಾಗಲಿ- ಎಂ.ಬಿ ಪುರಾಣಿಕ್
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ ಬಿ ಪುರಾಣಿಕ್ ಅವರು ಮಾತನಾಡಿ ಅಂಬಿಕೆ ಸಮುಚ್ಚಯದಲ್ಲಿ ತಲೆ ಎತ್ತಿ ನಿಂತಿದೆ. ಈ ಸಂಸ್ಥೆ ಆರಂಭವಾಗಿ ಇಷ್ಟೊಂದು ಎತ್ತರಕ್ಕೆ ಏರಲು ಅದರ ಹಿಂದೆ ಇರುವ ಸಮರ್ಪಣಾ ಭಾವನೆ ನಟ್ಟೋಜ ದಂಪತಿ ಮತ್ತು ಶಾಲಾ ಪೋಷಕರದ್ದು ಇದೆ.ಅವರು ಕೋಚಿಂಗ್ ಮಾಡುತ್ತಿದ್ದರೆ ಎಷ್ಟೋ ಜನ ಬರುತ್ತಿದ್ದರು. ಆದರೆ ಅವರು ಸನಾತನ ಧರ್ಮಕ್ಕೆ ಮುಡಿಪಾಗಿಟ್ಟು ದೇಶ ಪ್ರೇಮ, ಧರ್ಮಪ್ರೆಮ ಬೆಳೆಸಿದರು. ಈ ಸಂಸ್ಥೆ ಯಾವ ಉದಾತ ದೇಯದಿಂದ ಸಮಾಜದ ಮೇಲಿನ ಗೌರವ ಬೆಳೆಸಲು ಆಧುನಿಕ ಒಳ್ಳೆಯ ಶಿಕ್ಷಣ ಮುಂದಿನ ತಲೆಮಾರಿಗೆ ಕೊಡುವ ಪ್ರಯತ್ನ ಮಾಡುತ್ತಿದೆ. ನಿಮಗೆ ಶುಭವಾಗಲಿ, ಇಲ್ಲಿ ಬೆಳೆಯುವ ಒಬ್ಬೊಬ್ಬ ಮಗು ದೇಶದ ಸಂಪತ್ತು. ಅವರು ತಂದೆ ತಾಯಿಗೆ ಮಾತ್ರ ಸೊತ್ತಾಗದೆ ಜಗತ್ತಿನ ಸೊತ್ತಾಗಲಿ ಎಂದು ಹಾರೈಸಿದರು.
ನಮ್ಮ ಪ್ರಯತ್ನ ಯಾವತ್ತೂ ಇರಬೇಕು: ಪ್ರೊ.ಕೆ.ಪಿ.ರಾವ್
ತಂತ್ರಾಂಶ ತಜ್ಞ, ಕಂಪ್ಯೂಟರ್ನಲ್ಲಿ ಕನ್ನಡ ಕೀಪ್ಯಾಡ್ ಅನ್ನು ಆವಿಷ್ಕರಿಸಿದ ಪ್ರೊ.ಕೆ.ಪಿ.ರಾವ್ ಅವರು ಮಾತನಾಡಿ ಲೋಕ ಬಹಳ ವಿಶಾಲವಾಗಿದೆ. ಆತ್ಮವನ್ನು ನಾವೆ ಉದ್ದಾರ ಮಾಡಬೇಕು. ನಮ್ಮ ಪ್ರಯತ್ನ ಯಾವತ್ತು ಬೇಕು ಏಂದು ಹೇಳಿದ ಅವರು ಸಂಸ್ಥೆಗೆ ಶುಭ ಹಾರೈಸಿದರು.
ಅಂಬಿಕಾ ವಿದ್ಯಾಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ 10 ವರ್ಷಗಳ ಅನೇಕ ಏರುಪೇರುಗಳಲ್ಲಿ ಅನೇಕ ಸವಾಲು ಎದುರಿಸಿದ್ದೇವೆ. ಮಹಾಲಿಂಗೇಶ್ವರ ದೇವರ ಕೃಪೆ, ಪುರಂದರ ಭಟ್ ಅವರ ಮಾರ್ಗಶನದಿಂದ ಇಷ್ಟು ಎತ್ತರಕ್ಕೆ ಏರಿದ್ದೇವೆ. ಇಲ್ಲಿ ಉದ್ದೇಶ ಸ್ಪಷ್ಟ ಭಾರತದ ಕೀರ್ತಿಯನ್ನು ಪ್ರಪಂಚದಲ್ಲಿ ಎತ್ತರಿಸಬೇಕು. ಇವತ್ತು ಡಾಲರ್ ಪ್ರಪಂಚವನ್ನು ಆಳುತ್ತಿದೆ. ಅದರ ಬದಲಿಗೆ ಒಂದಲ್ಲ ಒಂದು ದಿನ ರೂಪಾಯಿ ಆಳಬಹುದಾ ಎಂದು ಪ್ರಶ್ನಿಸಿದರಲ್ಲದೆ, ಇದು ನಮ್ಮ ಮಕ್ಕಳ ನಿಜವಾದ ಶಿಕ್ಷಣ ಆಗಬೇಕು. ಇಡೀ ಪ್ರಪಂಚ ನಮ್ಮಲ್ಲಿರಬೇಕು. “ಕಾಲಯೆ ತಸ್ಮೈ ನಮಃ” ಎಂಬಂತೆ 10 ವರ್ಷಗಳ ನಂತರ ಇದು ಸಾಧ್ಯ. ಅದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಮ್ಮ ದೇಶ ಆಳುತ್ತದೆ. ಆಗ ಉತ್ತಮ ಆಡಳಿತವಾಗಲಿದೆ. ಲಂಚ ಭ್ರಷ್ಟಾಚಾರಗಳಿಗೆ ಒಂದೇ ಒಂದು ಮದ್ದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂದರು.