ಬೆಟ್ಟಂಪಾಡಿ: ವಿದ್ಯಾ ಭಾರತಿ ಕರ್ನಾಟಕ ಇದರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 11ರಂದು ನಡೆಸುವ ಬಗ್ಗೆ ಜು. 21 ರಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಇವರ ಉಪಸ್ಥಿತಿಯಲ್ಲಿ ಪೋಷಕರ, ಸಮಿತಿ ಸದಸ್ಯರ ಸಭೆ ನಡೆಯಿತು.
ಕ್ರೀಡಾಕೂಟದ ಸಲುವಾಗಿ ವಾಲಿಬಾಲ್ ಪಂದ್ಯಾಟ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸತೀಶ್ ರೈ ಕಟ್ಟಾವು, ಕಾರ್ಯದರ್ಶಿಯಾಗಿ ಪ್ರಕಾಶ್ ರೈ ಬೈಲಾಡಿ, ಕೋಶಾಧಿಕಾರಿಯಾಗಿ ವರದರಾಜ ನಾಯಕ್ ಆರ್ಲಪದವು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆಲಿ ಕುಂಞಿ ಚೂರಿಪದವು (ರಾಯಲ್ ಹಾರ್ಡ್ವೇರ್ ರೆಂಜ) ಆದಿತ್ಯ ಘಾಟೆ, ಶ್ರೀಮತಿ ಅಮಿತಾ, ಶ್ರೀಮತಿ ಅನನ್ಯ ಕಿಶೋರ್ ಶೆಟ್ಟಿ ಕೋರ್ಮಂಡ, ಜೊತೆ ಕಾರ್ಯದರ್ಶಿಗಳಾಗಿ ಶುಭಕರ ರೈ ಬೈಲಾಡಿ, ಶ್ರೀಮತಿ ಜಯಲಕ್ಷ್ಮಿ ಗುಮ್ಮಟಗದ್ದೆ, ರಾಮ್ ಪ್ರಕಾಶ್ ನೆಕ್ಕರೆ, ಸಂಚಾಲಕರಾಗಿ ರಾಧಾಕೃಷ್ಣ ರೈ ಪಟ್ಟೆ ಆಯ್ಕೆಯಾದರು.
ಶಾಲಾ ಮುಖ್ಯಗುರು ರಾಜೇಶ್ ಎನ್. ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ ಕಜೆ ಪಂದ್ಯಾಟ ಆಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶರವು, ಶಾಲಾ ಸಂಚಾಲಕ ಡಾ. ಸತೀಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಆಟಗಾರರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸುವಿಕೆ ಹಾಗೂ ಉತ್ತಮ ರೀತಿಯ ಯೋಜನೆಯ ಬಗ್ಗೆ ಚರ್ಚಿಸಲಾಗಿ ಉಪಸ್ಥಿತರಿಂದ ಸಲಹೆ ಸೂಚನೆ ಪಡೆಯಲಾಯಿತು. ಶಿಕ್ಷಕ ವೃಂದ ಸಹಕರಿಸಿದರು.