ಪುತ್ತೂರು: ಬನ್ನೂರಿನ ಬಲಮುರಿ ಸಮೀಪದ ಕೆ.ಎಂ ಸ್ಟೋರ್ ಬಳಿ ಭಾರೀ ಗಾಳಿ ಮಳೆಗೆ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಇದರಿಂದಾಗಿ ನೆಹರು ನಗರ, ಬಲ್ನಾಡು, ಕಾರ್ಜಾಲು, ಕರ್ಕುಂಜ, ರಕ್ತೇಶ್ವರಿ ವಠಾರ, ಕೊಡಿಪ್ಪಾಡಿ, ಪಡ್ನೂರು, ಕಬಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳೂರಿನಿಂದ ನೇರ ವಿದ್ಯುತ್ ಸರಬರಾಜು ಆಗುವ ವಿದ್ಯುತ್ ಕಂಬಗಳಿಗೆ ಹಾನಿಯಾಗದಿದ್ದರೂ ಅದರಿಂದ ವಿದ್ಯುತ್ ಪೂರೈಕೆಯಾಗುವ ಎರಡು ಕಂಬಗಳು ನೆಲಕ್ಕುರುಳಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ತ್ವರಿತ ಕಾಮಗಾರಿಗೆ ಹಿನ್ನಡೆಯಾಗಿದೆ. ಇದರಿಂದ ಮೆಸ್ಕಾಂ ಗೆ ಸುಮಾರು 50000ಕ್ಕಿಂತಲೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.
Home ಇತ್ತೀಚಿನ ಸುದ್ದಿಗಳು ಭಾರೀ ಗಾಳಿ ಮಳೆಗೆ ಮುರಿದು ಬಿದ್ದ ವಿದ್ಯುತ್ ಕಂಬ – ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ