ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಎಂಬಲ್ಲಿ ಧರೆಯೊಂದು ಕುಸಿದು ಬಿದ್ದ ಘಟನೆ ಜು.24ರಂದು ನಡೆದಿದ್ದು, ಧರೆಯ ಮೇಲ್ಭಾಗದಲ್ಲಿರುವ ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ.
ಇಲ್ಲಿನ ಸಫೀಯ ಎಂಬವರ ಮನೆಯ ಹಿಂಬದಿಯ ಧರೆ ಕುಸಿದು ಬಿದ್ದಿದ್ದು, ಇದರಿಂದ ಸಫೀಯ ಅವರ ಮನೆಯ ಹಿಂಬದಿ ಗೋಡೆಗೆ ಹಾನಿಯಾಗಿದೆ. ತೆಂಗಿನ ಮರವೊಂದು ಭಾಗಶಃ ಮಣ್ಣಿನಿಂದ ಮುಚ್ಚಿ ಹೋಗಿದೆ. ಇದೇ ಧರೆಯ ಮೇಲ್ಭಾಗದಲ್ಲಿರುವ ಲೀಲಾವತಿ ಎಂಬವರ ಮನೆಯು ಅಪಾಯದ ಸ್ಥಿತಿಯಲ್ಲಿದ್ದು, ಇನ್ನಷ್ಟು ಧರೆ ಕುಸಿದರೆ ಮನೆ ಸಂಪೂರ್ಣ ನೆಲಕಚ್ಚುವ ಸಾಧ್ಯತೆ ಇದೆ. ಸ್ಥಳಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.