ಪೂಂಜರೇ ನಮ್ಮ-ನಿಮ್ಮ ಪತ್ರಿಕೆಯ ಬಗ್ಗೆ ಸಂವಾದದಲ್ಲಿ ಇತರರ ಪ್ರವೇಶ ಬೇಡ…. ನಾವಿಬ್ಬರೇ ಅದನ್ನು ಇತ್ಯರ್ಥಗೊಳಿಸೋಣ

0

ಪ್ರಚಾರ, ಅಪಪ್ರಚಾರದ ಬಗ್ಗೆ ಚಾನೆಲ್‌ನಲ್ಲಿ ಅಥವಾ ತಾಳಮದ್ದಳೆಯಂತೆ ಸಂವಾದ ನಡೆಸೋಣ

ವಿಷಯಕ್ಕಾಗಿ ಸುದ್ದಿ ಉದಯದಲ್ಲಿ ಬಂದ ಅಪಪ್ರಚಾರ ಲೇಖನವನ್ನೂ ನಮ್ಮಲ್ಲಿ ಪ್ರಕಟಿಸಿದ್ದೇವೆ

ಹರೀಶ್ ಪೂಂಜರ `ಸುದ್ದಿಬಿಡುಗಡೆ ಸಮಾಜದ ದಾರಿ ತಪ್ಪಿಸುತ್ತಿದೆ’ ಎಂಬ ಹೇಳಿಕೆಗಳ ಬಗ್ಗೆ ಅವರು ಸ್ಪಷ್ಟೀಕರಣ ಕೊಡದೇ ಇದ್ದರೂ ಸುದ್ದಿ ಬಿಡುಗಡೆ ಪತ್ರಿಕೆಯು ಸರಿ ದಾರಿಯಲ್ಲಿ ಇದೆ ಎಂದು ಜನರು ಆಶೀರ್ವದಿಸಿರುವುದರಿಂದ ಆ ಬಗ್ಗೆ ಪತ್ರಿಕೆಯು ಮುಂದಕ್ಕೆ ಬರೆಯುವುದಿಲ್ಲವೆಂದು ಹೇಳಿದ್ದೆ.ಮುಂದಕ್ಕೆ ಏನಿದ್ದರೂ ಆ ವಿಷಯದಲ್ಲಿ ಪೂಂಜರೊಂದಿಗೆ ಚಾನೆಲ್‌ನಲ್ಲಿ ನೇರಾ ನೇರ ಚರ್ಚೆ ಎಂದು ತಿಳಿಸಿದ್ದೆ.ಆ ಮಾತನ್ನು ಮುರಿಯುವುದಿಲ್ಲ.


ಇದೀಗ ಪೂಂಜರ ಸುದ್ದಿ ಉದಯ ಪತ್ರಿಕೆಯಲ್ಲಿ ಸುದ್ದಿಯ ಆಡಳಿತ ಮತ್ತು ಲೇಖನಗಳ ಬಗ್ಗೆ ಅಪಪ್ರಚಾರ ಎಂಬ ಶೀರ್ಷಿಕೆಯಡಿಯಲ್ಲಿ ಆಕ್ಷೇಪದ ಲೇಖನ ಬಂದಿರುವುದರಿಂದ ಆ ಲೇಖನಕ್ಕೆ ಜನರೇ ಉತ್ತರ ನೀಡಲಿ ಎಂದು ಅದನ್ನು ಯಥಾವತ್ತಾಗಿ ಪತ್ರಿಕೆಯಲ್ಲಿ ಮುದ್ರಿಸಿ ಜನರಿಗೆ ನೀಡಿದ್ದೇವೆ

.
ಸುದ್ದಿ ಉದಯ ಪತ್ರಿಕೆಯ ನಿಜವಾದ ಮಾಲಕರು(ಬಂಡವಾಳ ಯಾರದ್ದು)ಯಾರು? ಎಂದು ಜನರಿಗೆ ತಿಳಿದಿದೆ. ಆ ಬಗ್ಗೆ ಜನರಿಗೆ ಯಾವುದೇ ಸಂಶಯವಿಲ್ಲ. ಆ ಬಗ್ಗೆ ಪ್ರಚಾರ, ಅಪಪ್ರಚಾರದ ಅವಶ್ಯಕತೆಯೂ ಇಲ್ಲ. ಆದರೂ ಸುದ್ದಿ ಉದಯ ಪತ್ರಿಕೆಯಿಂದ ತನಗೆ ಲಾಭವೇ ಇರುವಾಗ ಪೂಂಜರು ಅದನ್ನು ತನ್ನ ಪತ್ರಿಕೆಯಲ್ಲ ಎಂದು ಹೇಳುತ್ತಿರುವುದು ಯಾಕೆ?, ತನ್ನದು ಎಂದು ಒಪ್ಪಿಕೊಂಡರೆ ಅವರಿಗಾಗುವ ನಷ್ಟವೇನು?


ಎಂಬುದು ಜನರಿಗೂ ನಮಗೂ ಯಕ್ಷ ಪ್ರಶ್ನೆಯಾಗಿದೆ.ಆ ಬಗ್ಗೆಯೂ ಪೂಂಜ ಮತ್ತು ಅವರ ಬಳಗದವರೊಂದಿಗೆ ಚಾನೆಲ್‌ನಲ್ಲಿ ಅಥವಾ ತಾಳಮದ್ದಳೆಯಂತೆ ಸಂವಾದ ನಡೆಸಬೇಕೆಂದಿದ್ದೇನೆ. ಪ್ರೇಕ್ಷಕರಿಗೂ ಭಾಗವಹಿಸಲು ಅವಕಾಶ ನೀಡಲಿದ್ದೇನೆ.


ನಾವು ಪತ್ರಿಕೆಯಲ್ಲಿ ಬರೆದ ವಿಷಯಗಳಿಗೆ ಯಾರಾದರೂ ಪ್ರಶ್ನೆ ಕೇಳಿದರೆ, ಆಕ್ಷೇಪ ವ್ಯಕ್ತಪಡಿಸಿದರೆ ಅದನ್ನು ನಮ್ಮ ಪತ್ರಿಕೆಯಲ್ಲಿಯೇ ಪ್ರಕಟಿಸುತ್ತೇವೆ.ನಮಗೆ ಬೈದರೂ ಅದನ್ನೂ ಪ್ರಕಟಿಸುತ್ತೇವೆ. ಉದಾ, ಬಂಗೇರರು ಶಿವಾನಂದರಿಗೆ ಮಾನ ಮರ್ಯಾದೆ ಇಲ್ಲ ಎಂದಿದ್ದರು.ಪೂಂಜರು ಸುದ್ದಿ ಬಿಡುಗಡೆ ದಾರಿ ತಪ್ಪಿದೆ ಎಂದಿದ್ದರು.ಇವೆಲ್ಲ ಯಥಾವತ್ತಾಗಿ ಸುದ್ದಿಯಲ್ಲಿ ಪ್ರಕಟಗೊಂಡಿದೆ.ಇದೀಗ ಪೂಂಜರ ಸುದ್ದಿ ಉದಯ ಪತ್ರಿಕೆಯಲ್ಲಿ ಸುದ್ದಿಯ ಆಡಳಿತ ಮತ್ತು ಲೇಖನಗಳ ಬಗ್ಗೆ ಅಪಪ್ರಚಾರ ಎಂಬ ಶೀರ್ಷಿಕೆಯಡಿಯಲ್ಲಿ ಆಕ್ಷೇಪದ ಲೇಖನ ಬಂದಿರುವುದರಿಂದ ಆ ಲೇಖನಕ್ಕೆ ಜನರೇ ಉತ್ತರ ನೀಡಲಿ ಎಂದು ಅದನ್ನು ಯಥಾವತ್ತಾಗಿ ಪತ್ರಿಕೆಯಲ್ಲಿ ಮುದ್ರಿಸಿ ಜನರಿಗೆ ನೀಡಿದ್ದೇವೆ
ಅವರಿಗೆ ಅರ್ಥವಾಗಲು ಸುದ್ದಿ ಉದಯ ಪತ್ರಿಕೆ ಉದ್ಘಾಟನೆಗೂ ಮೊದಲು ಬಂದ 3 ಲೇಖನಗಳನ್ನು, ಪೂಂಜರ ಹೇಳಿಕೆಯ ನಂತರ ಬಂದ 4 ಲೇಖನಗಳನ್ನು ಓದಬಹುದು. ಅವುಗಳನ್ನು ಸುದ್ದಿ ಉದಯದ ಲೇಖನದೊಂದಿಗೆ ಜನರು ಓದಿ ಅರ್ಥ ಮಾಡಿಕೊಳ್ಳಲು ವಿನಂತಿಸುತ್ತಿದ್ದೇವೆ.

ಸುದ್ದಿ ಉದಯ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ
ಸಂವಾದಕ್ಕಾಗಿ, ಸತ್ಯ, ಸುಳ್ಳಿನ ವಿಮರ್ಶೆಗಾಗಿ ಈ ಕೆಳಗೆ ನೀಡಲಾಗಿದೆ.

ಸುದ್ದಿ ಉದಯ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವನ್ನು ಸುದ್ದಿಯ ಓದುಗರಿಗೆ, ಜನತೆಗೆ ಮಾಹಿತಿಗಾಗಿ, ವಿಮರ್ಶೆಗಾಗಿ ಮತ್ತು ಹರೀಶ್ ಪೂಂಜರೊಂದಿಗೆ ನೇರಾ ನೇರ ಸಂವಾದಕ್ಕಾಗಿ ಈ ಕೆಳಗೆ ಯಥಾವತ್ತಾಗಿ ಪ್ರಕಟಿಸಿದ್ದೇವೆ. ಲೇಖನದಲ್ಲಿಯ ಕೋಳಿ ಮತ್ತು ಅಜ್ಜಿಯ ಕಥೆ ಅದು ಕಹಳೆಯ ಶ್ಯಾಮ್ ಸುದರ್ಶನ್‌ರ ಹಕ್ಕಿನ ಕಥೆ. ಪುತ್ತೂರು ಸುದ್ದಿ ಪತ್ರಿಕೆ ಸಾಮಾಜಿಕ ಜಾಲತಾಣದ ದುರುಪಯೋಗದ ವಿರುದ್ಧ ಮತ್ತು ಬಲಾತ್ಕಾರದ ಬಂದ್‌ನ ವಿರುದ್ಧ ಹೋರಾಟ ಮಾಡುತ್ತಿರುವಾಗ ಪ್ರತಿಭಟನೆಯಾಗಿ, ಜನರ ಬೆಂಬಲಕ್ಕಾಗಿ ಪತ್ರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಆ ಸಂದರ್ಭದಲ್ಲಿ ಶ್ಯಾಮ್ ಸುದರ್ಶನ್ ಸುದ್ದಿಯ ವಿರುದ್ಧವಾಗಿ ಆ ಕಥೆಯನ್ನು ಅವರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅವರ ವಿರೋಧದ ನಡುವೆಯೂ ಪತ್ರಿಕೆ ಮತ್ತೆ ಪ್ರಾರಂಭವಾಗಿ ಮೊದಲಿಗಿಂತ ಹೆಚ್ಚು ಯಶಸ್ವಿಯಾಗಿ ನಡೆಯುತ್ತಿದೆ. ಆ ವಿಷಯವನ್ನು, ವಿರೋಧವನ್ನು ನಾವು ಅವರೂ ಮರೆತಿದ್ದೇವೆ. ಪರಸ್ಪರ ಸಹಾಯ ಮಾಡಿದ್ದೂ ಉಂಟು. ಸುದ್ದಿ ಉದಯದ ಲೇಖನದಲ್ಲಿ ಬಹಳಷ್ಟು ಅಂತಹ ವಿಷಯಗಳು ಇವೆ. ಮುಂದಕ್ಕೆ ಅವರು ಬದಲಾಗಬಹುದು. ಆ ಕಾರಣಕ್ಕೆ ಅವರ ಲೇಖನದಲ್ಲಿ ಬಹಳಷ್ಟು ವಿಷಯಗಳು ಸತ್ಯಕ್ಕೆ ದೂರವಾಗಿದೆ ಎಂದು ನಮಗೆ ತಿಳಿದಿದ್ದರೂ ಜನತೆಯ ವಿಮರ್ಶೆಗಾಗಿ ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿದ್ದೇವೆ.
-ಸುದ್ದಿ ಬಿಡುಗಡೆ ಬಳಗ ಬೆಳ್ತಂಗಡಿದಿನಾಂಕ 02-08-2023ರ ಸುದ್ದಿ ಉದಯ ಪತ್ರಿಕೆಯ ಲೇಖನ

LEAVE A REPLY

Please enter your comment!
Please enter your name here