ಜಿ.ಪಂ.,ತಾ.ಪಂ.ಕ್ಷೇತ್ರಗಳ ಮರುವಿಂಗಡಣೆ – ಬಂಟ್ವಾಳ ತಾಲೂಕಿನಲ್ಲಿ 8 ಜಿ.ಪಂ, 25 ತಾ.ಪಂ.ಕ್ಷೇತ್ರಗಳು

0

ವಿಟ್ಲ: ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ,ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ 9 ತಾಲೂಕುಗಳ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿ ಅಂತಿಮಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪ೦ಚಾಯತ್ ರಾಜ್ ಸಚಿವಾಲಯವು ಆದೇಶಿಸಿದೆ.
ಉಳ್ಳಾಲ ತಾಲೂಕು ಪ್ರತ್ಯೇಕಗೊಂಡ ಬಳಿಕ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಜಿ.ಪಂ, ತಾಪಂ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳು ಆಗಿವೆ. ಇದೀಗ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಗೆ 8 ಕ್ಷೇತ್ರಗಳು ಇರಲಿವೆ. ತಾಲೂಕು ಪಂಚಾಯತ್ ಗೆ 25 ಕ್ಷೇತ್ರಗಳು. ಸಂಗಬೆಟ್ಟು, ಸರಪಾಡಿ, ಸಜಿಪಮುನ್ನೂರು, ಗೋಳ್ತಮಜಲು, ಮಾಣಿ, ಕೊಳ್ನಾಡು, ಪುಣಚ, ಪುದು ಇವು ಜಿಲ್ಲಾ ಪಂಚಾಯತ್ ಕ್ಷೇತ್ರಗಳು.


ಜಿಲ್ಲಾ ಪಂಚಾಯತ್ ಕ್ಷೇತ್ರಗಳು
ಸಂಗಬೆಟ್ಟು ಕ್ಷೇತ್ರ: ಇದರಲ್ಲಿ ಸಂಗಬೆಟ್ಟು, ಪಂಜಿಕಲ್ಲು, ಪಿಲಾತಬೆಟ್ಟು ತಾಲೂಕು ಪಂಚಾಯತ್ ಕ್ಷೇತ್ರಗಳು ಸೇರಿವೆ.
ಸರಪಾಡಿ ಕ್ಷೇತ್ರ: ಇದರಲ್ಲಿ ಮಣಿನಾಲ್ಕೂರು, ನಾವುರು, ಕಾವಳಮುಡೂರು ತಾಲೂಕು ಪಂಚಾಯತ್ ಕ್ಷೇತ್ರಗಳು ಸೇರಿವೆ.
ಸಜಿಪಮುನ್ನೂರು ಕ್ಷೇತ್ರ: ಇದರಲ್ಲಿ ಅಮ್ಮುಂಜೆ, ಅಮ್ಟಾಡಿ, ಸಜಿಪಮುನ್ನೂರು, ಸಜಿಪಮೂಡ ತಾಲೂಕು ಪಂಚಾಯತ್ ಕ್ಷೇತ್ರಗಳು ಸೇರಿವೆ.
ಗೋಳ್ತಮಜಲು ಕ್ಷೇತ್ರ: ಇದರಲ್ಲಿ ನರಿಕೊಂಬು, ಗೋಳ್ತಮಜಲು, ಬಾಳ್ತಿಲ ತಾಲೂಕು ಪಂಚಾಯತ್ ಕ್ಷೇತ್ರಗಳು ಸೇರಿವೆ.
ಮಾಣಿ ಕ್ಷೇತ್ರ: ಇದರಲ್ಲಿ ಮಾಣಿ, ವೀರಕಂಭ, ವಿಟ್ಲಪಡ್ನೂರು, ಕೆದಿಲ ತಾಲೂಕು ಪಂಚಾಯತ್ ಕ್ಷೇತ್ರಗಳು ಸೇರಿವೆ.
ಕೊಳ್ನಾಡು ಕ್ಷೇತ್ರ: ಇದರಲ್ಲಿ ಕೊಳ್ನಾಡು, ಕನ್ಯಾನ, ಮಂಚಿ ತಾಲೂಕು ಪಂಚಾಯತ್ ಕ್ಷೇತ್ರಗಳು ಒಳಗೊಂಡಿವೆ.
ಪುಣಚ ಕ್ಷೇತ್ರ: ಅಳಿಕೆ, ಪುಣಚ, ವಿಟ್ಲಮುಡ್ನೂರು ತಾಲೂಕು ಪಂಚಾಯತ್ ಕ್ಷೇತ್ರಗಳು ಒಳಗೊಂಡಿದೆ.
ಪುದು ಕ್ಷೇತ್ರ: ಪುದು ಮತ್ತು ತುಂಬೆ ತಾಪಂ ಕ್ಷೇತ್ರಗಳು ಒಳಗೊಂಡಿದೆ.
ತಾಲೂಕು ಪಂಚಾಯತ್ ಕ್ಷೇತ್ರಗಳು:
ಸಂಗಬೆಟ್ಟು: ಸಂಗಬೆಟ್ಟು (ಗ್ರಾಪಂ) ಕರ್ಪೆ, ರಾಯಿ (ಗ್ರಾಪಂ), ಕೊಯಿಲ, ಕುಕ್ಕಿಪ್ಪಾಡಿ (ಗ್ರಾಪಂ), ಎಲಿಯನಡುಗೋಡು ಗ್ರಾಮ. ಪಂಜಿಕಲ್ಲು: ಪಂಜಿಕಲ್ಲು (ಗ್ರಾಪಂ), ಮೂಡನಡುಗೋಡು, ಬುಡೋಳಿ, ಅರಳ (ಗ್ರಾಪಂ). ಪಿಲಾತಬೆಟ್ಟು: ಅಜ್ಜಿಬೆಟ್ಟು, ಚೆನ್ನೈತೋಡಿ (ಗ್ರಾಪಂ), ಕುಡಂಬೆಟ್ಟು, ಪಿಲಿಮೊಗರು, ಇರ್ವತ್ತೂರು (ಗ್ರಾಪಂ), ಮೂಡಪಡುಕೋಡಿ, ಪಿಲಾತಬೆಟ್ಟು (ಗ್ರಾಪಂ) ಮಣಿನಾಲ್ಕೂರು: ಬಡಗಕಜೆಕಾರು (ಗ್ರಾಪಂ), ತೆಂಕಕಜೆಕಾರು, ಉಳಿ, ಮಣಿನಾಲ್ಕೂರು (ಗ್ರಾಪಂ). ನಾವೂರು: ದೇವಸ್ಯಮುಡೂರು, ಸರಪಾಡಿ (ಗ್ರಾಪಂ), ನಾವೂರು (ಗ್ರಾಪಂ), ದೇವಸ್ಯಪಡೂರು. ಕಾವಳಮುಡೂರು: ಕಾವಳಮುಡೂರು(ಗ್ರಾ ಪಂ), ಕಾವಳಪಡೂರು (ಗ್ರಾಪಂ), ಕಾಡಬೆಟ್ಟು ಗ್ರಾಮ. ಅಮ್ಮುಂಜೆ: ಅಮ್ಮುಂಜೆ (ಗ್ರಾಪಂ), ಕರಿಯಂಗಳ (ಗ್ರಾಪಂ), ಬಡಗಬೆಳ್ಳೂರು (ಗ್ರಾಪಂ), ತೆಂಕಬೆಳ್ಳೂರು ಗ್ರಾಮ. ಅಮ್ಟಾಡಿ: ಕಳ್ಳಿಗೆ (ಗ್ರಾಪಂ), ಅಮ್ಟಾಡಿ (ಗ್ರಾಪಂ), ಕುರಿಯಾಳ ಗ್ರಾಮ ಸಜಿಪಮುನ್ನೂರು: ಸಜಿಪಮುನ್ನೂರು (ಗ್ರಾಪಂ) ಸಜಿಪಮೂಡ: ಸಜಿಪಮೂಡ ಗ್ರಾಪಂ ನರಿಕೊಂಬು: ನರಿಕೊಂಬು (ಗ್ರಾಪಂ), ಶಂಭೂರು. ಗೋಳ್ತಮಜಲು: ಗೋಳ್ತಮಜಲು (ಗ್ರಾಪಂ), ಅಮ್ಟೂರು ಗ್ರಾಮ ಬಾಳ್ತಿಲ: ಕಡೇಶ್ವಾಲ್ಯ (ಗ್ರಾಪಂ), ಬರಿಮಾರು (ಗ್ರಾಪಂ), ಬಾಳ್ತಿಲ (ಗ್ರಾಪಂ) ಮಾಣಿ: ಮಾಣಿ ಗ್ರಾಪಂ, ಪೆರಾಜೆ ಗ್ರಾಪಂ, ನೆಟ್ಲಮುಡ್ನೂರು ಗ್ರಾಪಂ ವೀರಕಂಭ: ವೀರಕಂಭ ಗ್ರಾಪಂ, ಅನಂತಾಡಿ ಗ್ರಾಪಂ ವಿಟ್ಲಪಡ್ನೂರು: ವಿಟ್ಲಪಡ್ನೂರು ಗ್ರಾಪಂ, ಬೊಳಂತೂರು ಗ್ರಾಪಂ ಕೆದಿಲ: ಕೆದಿಲ ಗ್ರಾಪಂ, ಪೆರ್ನೆ ಗ್ರಾಪಂ, ಬಿಳಿಯೂರು ಗ್ರಾಪಂ ಕೊಳ್ನಾಡು: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿ. ಕನ್ಯಾನ: ಕನ್ಯಾನ ಗ್ರಾಪಂ, ಕರೋಪಾಡಿ ಗ್ರಾಪಂ ಮಂಚಿ: ಮಂಚಿ ಗ್ರಾಪಂ, ಸಾಲೆತ್ತೂರು ಗ್ರಾಪಂ. ಪುಣಚ: ಕೇಪು ಗ್ರಾಪಂ ಮತ್ತು ಪುಣಚ ಗ್ರಾಪಂ. ಅಳಿಕೆ: ಪೆರುವಾಯಿ ಗ್ರಾಪಂ, ಮಾಣಿಲ ಗ್ರಾಪಂ ಮತ್ತು ಅಳಿಕೆ ಗ್ರಾಪಂ ವಿಟ್ಲಮುಡ್ನೂರು: ವಿಟ್ಲಮುಡ್ನೂರು, ಇಡ್ಕಿದು ಗ್ರಾಪಂಗಳು ಹಾಗೂ ಕುಳ ಗ್ರಾಮ ಪುದು: ಪುದು ಗ್ರಾಪಂ ತುಂಬೆ: ಮೇರಮಜಲು ಗ್ರಾಪಂ, ತುಂಬೆ ಗ್ರಾಪಂ ಮತ್ತು ಕೊಡ್ನಣ್ ಗ್ರಾಮ

ಜಿ.ಪಂ.ಕ್ಷೇತ್ರಗಳು:
ಸಂಗಬೆಟ್ಟು, ಸರಪಾಡಿ, ಸಜಿಪಮುನ್ನೂರು, ಗೋಳ್ತಮಜಲು, ಮಾಣಿ, ಕೊಳ್ನಾಡು, ಪುಣಚ, ಪುದು

ತಾ.ಪಂ.ಕ್ಷೇತ್ರಗಳು:
ಸಂಗಬೆಟ್ಟು, ಪಂಜಿಕಲ್ಲು, ಪಿಲಾತಬೆಟ್ಟು, ಮಣಿನಾಲ್ಕೂರು, ನಾವೂರು, ಕಾವಳಮುಡೂರು, ಅಮ್ಮುಂಜೆ, ಅಮ್ಟಾಡಿ, ಸಜಿಪಮುನ್ನೂರು, ಸಜಿಪಮೂಡ, ನರಿಕೊಂಬು, ಗೋಳ್ತಮಜಲು, ಬಾಳ್ತಿಲ, ಮಾಣಿ, ವೀರಕಂಭ, ವಿಟ್ಲಪಡ್ನೂರು, ಕೆದಿಲ, ಕೊಳ್ನಾಡು, ಕನ್ಯಾನ, ಮಂಚಿ, ಪುಣಚ, ಅಳಿಕೆ, ವಿಟ್ಲಮುಡ್ನೂರು, ಪುದು, ತುಂಬೆ

LEAVE A REPLY

Please enter your comment!
Please enter your name here