ಅನಂತಾಡಿ‌ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಜಾತಾ ಎ., ಉಪಾಧ್ಯಕ್ಷರಾಗಿ ಸಂಧ್ಯಾ ಕೆ.

0

ವಿಟ್ಲ: ಅನಂತಾಡಿ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆ.11ರಂದು ನಡೆಯಿತು.


ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತಾ ಎ. ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಸಂಧ್ಯಾ ಕೆ. ರವರು ಅವಿರೋಧವಾಗಿ ಆಯ್ಕೆಯಾದರು. ಬಂಟ್ವಾಳ ತಾಲೂಕು ಅಕ್ಷರ ದಾಸೋಹದ ಸಾಹಾಯಕ ನಿರ್ದೇಶಕರಾದ ನೋಣಯ್ಯರವರು ಚುನಾವಣಾ ಪ್ರಕ್ರೀಯೆ ನಡೆಸಿಕೊಟ್ಟರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
ಲಾವಣ್ಯ ಪಿ. ಹಾಗೂ ವಿಶ್ವನಾಥ ಬಿ. ಸಹಕರಿಸಿದರು.


ಮಾಜಿ ಅಧ್ಯಕ್ಷರಾದ ಗಣೇಶ್ ಪೂಜಾರಿ, ಮಾಜಿ ಉಪಾಧ್ಯಕ್ಷ ಕುಸುಮಾಧರ ಗೌಡ ಟಿ. ಸದಸ್ಯರಾದ ರಶ್ಮಿ ಎನ್. ಎಸ್. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here