ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ಆಟಿದ ಕೂಟ

0

ಪುತ್ತೂರು: ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಆಟಿದ ಕೂಟ ಎಂಬ ವಿಶೇಷ ಕಾರ್ಯಕ್ರಮ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸೀತಾ ಉದಯಶಂಕರ್ ಭಟ್ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಹಿಳಾ ಶಕ್ತಿ ಮತ್ತು ಸಂಘಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಬಡವರ ಬಂಧು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸದಾ ಶ್ರಮಿಸುತ್ತಿರುವ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಹಾಗೂ ಶಕುಂತಲಾ ಶೆಟ್ಟಿ ಅವರು ಆಟಿಯ ಆಟಗಳಲ್ಲೊಂದಾದ ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್ ಆಟಿಯ ವಿಶೇಷತೆ ಬಗ್ಗೆ ಎಲ್ಲರಿಗೂ ಮನಮುಟ್ಟುವಂತೆ ಮಾತನಾಡಿದರು. ಮಹಿಳಾ ಕಾಂಗ್ರೆಸ್ಸಿನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ತಮ್ಮ ತಮ್ಮ ಮನೆಯಲ್ಲಿ ಮಾಡಿದಂತಹ ವಿಧವಿಧವಾದ ತಿಂಡಿ ತಿನಿಸುಗಳನ್ನು ಉಣ ಬಡಿಸಿದರು. ವಿಶೇಷವಾಗಿ ಸುಮಾ ಅಶೋಕ್ ರೈ ಅವರ ಕಟ್ಟದ ಕೋಳಿಯ ಸುಕ್ಕ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ರೈ ದಂಪತಿಗಳನ್ನು ಸನ್ಮಾನಿಸಲಾಯಿತು. ಬ್ಲಾಕ್ ಉಪಾಧ್ಯಕ್ಷೆ ವಿಶಾಲಕ್ಷಿ ಬನ್ನೂರು ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ನ ಕೋಶಾಧಿಕಾರಿ ಶುಭ ಮಾಲಿನಿ ಮಲ್ಲಿ, ಬ್ಲಾಕ್ ಅಧ್ಯಕ್ಷ ಎಂಬಿ ವಿಶ್ವನಾಥ್ ರೈ, ನಗರ ಅಧ್ಯಕ್ಷ ಮಹಮ್ಮದ್ ಆಲಿ, ಕಾಂಗ್ರೆಸ್ ಮುಖಂಡರಾದ ಶಿವರಾಂ ಆಳ್ವ, ರೋಷನ್ ರೈ, ಕೃಷ್ಣ ಪ್ರಸಾದ್ ಆಳ್ವ, ಕಚೇರಿ ಕಾರ್ಯದರ್ಶಿ ಸಿರಿಲ್ ರಂಜಿತ್ ಬಂಗೇರ, ಸನತ್ ರೈ, ಸಂತೋಷ್ ಚಿಲ್ಮಿತಾರು, ಪ್ರಕಾಶ್‌ ಪುರುಷರಕಟ್ಟೆ, ಪ್ರಜ್ವಲ್‌ ರೈ ತೋಟ್ಲ, ವಿಶ್ವನಾಥ್‌ ಅಮ್ಮುಂಜೆ, ನ್ಯಾಯವಾದಿ ಸಾಹಿರಾ ಝುಬೈರ್‌, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ಉಲ್ಲಾಸ್ ಕೊಟ್ಯಾನ್, ಶರೀಫ್ ಬಲ್ನಾಡ್, ದಾಮೋದರ್ ಭಂಡಾರ್ಕರ್, ಪುರಂದರ ರೈ ಕೋರಿಕ್ಕಾನ ಸಹಕರಿಸಿದರು.

ಮಹಿಳಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಕಲಾವತಿ ಗೌಡ ಧನ್ಯವಾದ ಸಮರ್ಪಿಸಿ, ವಿಲ್ಮಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಅಸ್ಮ ಘಟ್ಟಮನೆ, ಜೆಸಿಂತಾ, ನಬಿಸ ಬಪ್ಪಳಿಗೆ, ಚಂದ್ರಕಲಾ ನರಿ ಮೊಗುರು, ರೋಜ್ಲಿ ಮರೀಲ್, ವನಿತಾ ಆಚಾರ್ಯ, ರೇಷ್ಮ ಪ್ರಿಯ, ಬದ್ರುನ್ನಿಶಾ, ಸುಧಾ ಕುಂಜತ್ತಾಯ, ಭವಾನಿ ಉಕ್ರಪ್ಪ, ಸುಮಲತಾ, ನಳಿನಿ, ಗ್ರೇಟಾ ಡಿಸೋಜಾ, ಯೋಗಿನಿ ರೈ, ಗೀತಾ ಸರ್ವೆ, ವೀಣಾ, ಡಿ ಕೆ ಮಹಾಬಲ ರೈ ಆರ್ಯಾಪು, ರವಿ ಕುಂಜತ್ತಾಯ, ಲೆಸ್ಟ್ರನ್ ಪಿಂಟೊ, ಜಾನ್ ಸಿರಿಲ್ ರೋಡ್ರಿಗಸ್, ಮನಮೋಹನ್ ರೈ, ಸುಜಯ ಕೆಯ್ಯೂರು, ಸನಮ್, ಜಯಂತಿ ಬಲ್ನಾಡು, ಸುಂದರಿ, ಚಿತ್ರ, ಶಾರದಾ ಒಳಮೊಗ್ರು, ಕಲಾವಿದ ಕೃಷ್ಣಪ್ಪ, ಯಾಕೂಬ್ ಮುಲಾರು, ಮೀನಾಕ್ಷಿ ರಾಜೇಶ್ವರಿ, ಅಂಕಿತ, ರೇಖಾ ಬಿ ಶೆಟ್ಟಿ, ಅಶ್ವಿತ ಡಿಸೋಜಾ, ವಿಜಯಲಕ್ಷ್ಮಿ, ಬೇಬಿ, ವಿಮಲಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here