ತಿಂಗಳಾಡಿ: ದರ್ಬೆ ಬೈತುಲ್ ರಹ್ಮಾನ್ ಸುನ್ನಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಬೈತುಲ್ ರಹ್ಮಾನ್ ಸುನ್ನಿ ಜುಮಾ ಮಸೀದಿ ದರ್ಬೆ ತಿಂಗಳಾಡಿ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜರೋಹಣವನ್ನು ಮಸೀದಿಯ ಅಧ್ಯಕ್ಷ ರಹೀಮ್ ದರ್ಬೆ ನೆರವೇರಿಸಿ ಶುಭ ಹಾರೈಸಿದರು. ಮಸೀದಿಯ ಖತೀಬ್ ಶಾಫಿ ಸಹದಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗ, ಬಲಿದಾನಗಳ ಬಗ್ಗೆ ವಿವರಿಸಿದರು. ಮಸೀದಿಯ ಇನ್ನೊರ್ವ ಉಸ್ತಾದ್ ಮಹಮ್ಮದ್ ಸಖಾಫಿ ದರ್ಬೆ ಶುಭ ಹಾರೈಸಿದರು. ಮಸೀದಿಯ ಮಾಜಿ ಖತೀಬ್ ಮಹಮ್ಮದ್ ಮದನಿ ಉಸ್ತಾದ್ ದುವಾ ನೆರವೇರಿಸಿದರು. ಜಮಾಅತ್‌ಗೆ ಒಳಪಟ್ಟ ಲತೀಫ್ ಟಿ.ಎ, ಉಸ್ಮಾನ್ ಹಾಜಿ ಅಂಙತ್ತಡ್ಕ, ಇಸಾಕ್ ಉಸ್ತಾದ್ ಅಂಙತ್ತಡ್ಕ, ಹಾರಿಸ್ ಬಲ್ಕಾಡ್, ಮಸೀದಿ ಕಾರ್ಯದರ್ಶಿ ಯುಸುಫ್ ದರ್ಬೆ ಮುಂತಾದ ಹಲವಾರು ಪ್ರಮುಖರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here