ಪೆರಾಬೆ ಗ್ರಾ.ಪಂ.ನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

0

ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್‌ನಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಮೋಹನದಾಸ್ ರೈ ಪರಾರಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಸ್ಥಳೀಯ ವೈದ್ಯರಾದ ಡಾ.ಕುಮಾರ ಸುಬ್ರಹ್ಮಣ್ಯ ಭಾಗವಹಿಸಿದ್ದರು. ಪೆರಾಬೆ ಗ್ರಾ.ಪಂ.ವ್ಯಾಪ್ತಿಯಲ್ಲಿ 10 ವರ್ಷಗಳ ಕಾಲ ಪಶುವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಶೋಕ್ ಕೊಯಿಲ ಅವರನ್ನು ಗೌರವಿಸಲಾಯಿತು.


ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ರೈ ಅಗತ್ತಾಡಿ, ಸದಾನಂದ ಕುಂಟ್ಯಾನ, ಪಿ.ಜಿ.ರಾಜು, ಕೃಷ್ಣ ವೈ, ವೇದಾವತಿ, ಸುಶೀಲ, ಫಯಾಝ್ ಸಿ.ಎಂ., ಮೋಹಿನಿ, ಮಮತ, ಕಾವೇರಿ, ಪಿಡಿಒ ಶಾಲಿನಿ ಕೆ.ಬಿ. ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿ, ವಂದಿಸಿದರು. ಸದ್ಯೆ ಮಮತ ನಿರೂಪಿಸಿದರು.

LEAVE A REPLY

Please enter your comment!
Please enter your name here