ಶ್ರೀಧರ್ ಭಟ್ ಬ್ರದರ್ಸ್ ಫರ್ನಿಚರ್ ಶೋರೂಂನಲ್ಲಿ `ಸ್ವಾತಂತ್ರ್ಯೋತ್ಸವ’ದ ಭರ್ಜರಿ ಸೇಲ್

0

ಪುತ್ತೂರು: ಇಲ್ಲಿನ ಪೊಲೀಸ್ ಕ್ವಾರ್ಟರ್ಸ್ ಬಳಿಯಿರುವ ಕೋರ್ಟ್ ಹಿಲ್ ರೋಡ್‌ನಲ್ಲಿ ಕಳೆದ 83 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀಧರ್ ಭಟ್ ಬ್ರದರ್ಸ್ ಫರ್ನಿಚರ್ ಶೋ ರೂಂನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭರ್ಜರಿ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು ಆ.19ರಂದು ಕೊನೆ ದಿನವಾಗಿದೆ. ಈ ಮೇಳದಲ್ಲಿ ವಿವಿಧ ಬಗೆಯ ಮತ್ತು ನವನವೀನ ವಿನ್ಯಾಸಗಳ ಪೀಠೋಪಕರಣಗಳು ಮತ್ತು ಮನೆ ಬಳಕೆಯ ಫರ್ನಿಚರ್ ವಸ್ತುಗಳ ಮೇಲೆ 10 ರಿಂದ 25% ವರೆಗೆ ರಿಯಾಯಿತಿ ಗ್ರಾಹಕರಿಗಾಗಿ ಕಾಯುತ್ತಿದೆ. ಈ ಆಫರ್ ಸೇಲ್ ಆಗಸ್ಟ್ 14 ರಿಂದ ಆರಂಭಗೊಂಡಿದೆ.ವಿವಿಧ ಬಗೆಯ ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್ ಮತ್ತು ಕುರ್ಚಿಗಳು, ವಿವಿಧ ವಿನ್ಯಾಸಗಳ ಕಾಟ್ ಗಳು ಗ್ರಾಹಕರ ಮನದಿಚ್ಚೆಗೆ ಒಪ್ಪುವ ರೀತಿಯ ಅಪೂರ್ವ ಸಂಗ್ರಹವೇ ಇಲ್ಲಿದೆ. ಪುತ್ತೂರು ಮತ್ತು ಆಸುಪಾಸಿನ ಭಾಗದ ಗ್ರಾಹಕರು ಈ ಭರ್ಜರಿ ಆಫರ್ ಸೇಲ್‌ನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರವರ್ತಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದೇ ಮನೆಗೊಯ್ಯಿರಿ: ಗ್ರಾಹಕರ ಅನುಕೂಲಕ್ಕಾಗಿ ಇಲ್ಲಿ ಖರೀದಿಸುವ ಫರ್ನಿಚರ್ ಗಳಿಗೆ ಬಜಾಜ್ ಫಿನ್ ಸರ್ವ್ 0% ದರದಲ್ಲಿ ಫೈನಾನ್ಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವಾಗ, ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಮತ್ತು ಮನೆ ಮಂದಿಯ ಸೌಕರ್ಯಕ್ಕೆ ಅಗತ್ಯವಾಗಿರುವ ಫರ್ನಿಚರ್ ಐಟಂಗಳನ್ನು ಇಂದೇ ನಿಮ್ಮ ಮನೆಗೊಯ್ಯಲು ಮರೆಯಬೇಡಿ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here