ನರೇಗಾಕ್ಕೆ ಆಧಾರ್‌ನ ಜೋಡಣೆಗೆ ಆ.31 ಕೊನೆ ದಿನ

0

ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ(ಎಂ-ನರೇಗಾ) ಹಣ ಪಾವತಿಗೆ ಕೆಲಸಗಾರರ ಜಾಬ್ ಕಾರ್ಡ್‌ಗೆ ಆಧಾರ್‌ ಜೋಡಣೆ ಕಡ್ಡಾಯವಾಗಿದೆ.

ಆಧಾರ್ ಜೋಡಣೆಗೆ ಆ.31 ಕೊನೆಯ ದಿನವಾಗಿದ್ದು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಆಗುವುದಿಲ್ಲ ಎಂದು ಮೂಲಗಳು ಗುರುವಾರ ಸ್ಪಷ್ಟಪಡಿಸಿವೆ. ಎಂ-ನರೇಗಾ ಯೋಜನೆಯಲ್ಲಿ ದುಡಿಮೆ ಮಾಡಿದವರಿಗೆ ಹಣ ಪಾವತಿಯನ್ನು ಆಧಾರ್ ಆಧರಿಸಿ ಮಾಡುವುದನ್ನು 2023ರ ಜನವರಿಯಲ್ಲಿ ಜಾರಿಗೆ ತರಲಾಗಿದೆ. ಮೊದಲಿಗೆ ಫೆ.1ರವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಮಾ.31 ಹಾಗೂ ಜೂ.30ಕ್ಕೆ ವಿಸ್ತರಿಸಲಾಗಿತ್ತು. ಇದೀಗ ಆ. 31ಕ್ಕೆ ಕೊನೆ ದಿನವಾಗಿದೆ.

LEAVE A REPLY

Please enter your comment!
Please enter your name here