ಪುತ್ತೂರು: ಕಾಸರಗೋಡು ಏತಡ್ಕ ಚೈತ್ರ ನಿವಾಸದ ನಿವೃತ್ತ ಮುಖ್ಯಗುರು ದಿ. ನಾರಾಯಣ ಭಟ್ರವರ ಪತ್ನಿ ಸವಿತಾ(86ವ.)ರವರು ಅಸೌಖ್ಯದಿಂದ ಆ.26ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಕೃಷಿಕ ಉದಯಶಂಕರ ಭಟ್, ಕೋಡಿಂಬಾಡಿ ಶಾಂತಿನಗರ ಸರಕಾರಿ ಪ್ರೌಢಶಾಲಾ ಮುಖ್ಯಗುರು ವಿಷ್ಣುಪ್ರಸಾದ್, ಬದಿಯಡ್ಕದಲ್ಲಿ ಟೈಲರ್ ಆಗಿರುವ ಸುರೇಶ್ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.