ಪುಣಚ ಮಹಿಷಮರ್ದಿನಿ ದೇವಸ್ಥಾನಕ್ಕೆ ಶ್ರದ್ದಾನಾಥ್ ಜೀ ಮಹಾರಾಜ್ ಭೇಟಿ

0

ಪುಣಚ : ಜೋಗಿ ಸಮಾಜದ ಶ್ರೀ ಶ್ರದ್ದಾನಾಥ್ ಜೀ ಮಹಾರಾಜ್‌ರವರು ಆ.27ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬೆಳಗ್ಗೆ ಆಗಮಿಸಿದ ಶ್ರೀ ಗಳನ್ನು ಮಹಿಷಮರ್ದಿನಿ ಸಿಂಗಾರಿ ಮೇಳದ ಚೆಂಡೆ ವಾದನದ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಅವರು ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಜೋಗಿ ಸಮಾಜ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಪುರುಷ ದಂಪತಿ ಹಾಗೂ ಬೆಳಿಯೂರುಕಟ್ಟೆ ಗ್ರಾಮ ಸಮಿತಿ ಉಪಾಧ್ಯಕ್ಷ ಮೋನಪ್ಪ ಪುರುಷ ದಂಪತಿ ಕಳೆಂಜಿಲರವರು ಪಾದಪೂಜೆ ನೆರವೇರಿಸಿದರು. ಜೋಗಿ ಸಮಾಜ ಬಾಂಧವರಿಂದ ಶ್ರೀ ಗಳಿಗೆ ಅತಿಥಿ ಸತ್ಕಾರ ಫಲಪುಷ್ಪ, ಗುರು ಕಾಣಿಕೆ ನೀಡಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಹಾಗೂ ಪುಣಚ, ಕೇಪು, ಬೆಳಿಯೂರುಕಟ್ಟೆ ಜೋಗಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here