ಆ.30: ಚಿನ್ನ ತೂಕ ಯಂತ್ರಕ್ಕೆ ಸೀಲ್ ಕಾರ್ಯಾಗಾರ

0

ಪುತ್ತೂರು: ಇಲೆಕ್ಟ್ರಾನಿಕ್ ಚಿನ್ನ ತೂಕ ಮಾಡುವ ಯಂತ್ರಕ್ಕೆ ಮೊಹರು (ಸೀಲ್) ಹಾಕುವ ಕಾರ್ಯಾಗಾರ ಆ.30ರಂದು ಬೆಳಿಗ್ಗೆ 10ರಿಂದ ಸಂಜೆ 3ರವರೆಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಲಿದೆ. ಮಂಗಳೂರು ರಥಬೀದಿ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ಪುತ್ತೂರು ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ಬೊಳುವಾರು ವಿಶ್ವಕರ್ಮ ಯುವ ಸಮಾಜದ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ಕಾರ್ಯಾಗಾರ ನಡೆಸಿಕೊಡಲಿದೆ. ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಚಿನ್ನದ ಕೆಲಸಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ಮಾಹಿತಿಗೆ 9845220437, 9900828277 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here