ಉಪ್ಪಿನಂಗಡಿ : ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ, ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ, ವೇದಗಣಿತ ಮತ್ತು ಸಂಸ್ಕ್ರತಿ ಜ್ಞಾನ ಮಹೋತ್ಸವ ಸ್ಪರ್ಧೆಯು ಆ.26ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ನಡೆಯಿತು.
ಶಿಶುವರ್ಗದ ವೈಜ್ಞಾನಿಕ ಪ್ರಯೋಗದಲ್ಲಿ ಗವಿನ್ ರೆಶಿಮೆ ಪ್ರಥಮ ಸ್ಥಾನ,ವಿಜ್ಞಾನ ಲೇಖನ ವಾಚನದಲ್ಲಿ ಹನಿಷ್ಕಾ. ಯು ದ್ವಿತೀಯ ಸ್ಥಾನ, ಗಣಿತ ರಸಪ್ರಶ್ನೆಯಲ್ಲಿ ಮೊಹಮ್ಮದ್ ಹಾಶೀಮ್, ಅನಿಪ್ರಿಯ, ಲಿತಿಕ್ಷಾ ತೃತೀಯ ಸ್ಥಾನ, ಬಾಲ ವರ್ಗದಲ್ಲಿ ಗಣಿತ ಪ್ರಯೋಗ ಸ್ಪರ್ಧೆಯಲ್ಲಿ ವನ್ವಿತ್ ಎಸ್, ಶ್ರಾವ್ಯ ವಿ. ಎಂ ತೃತೀಯ ಸ್ಥಾನ,ಕಿಶೋರ ವರ್ಗದಲ್ಲಿ ಗಣಿತ ಲೇಖನ ವಾಚನದಲ್ಲಿ ಮೊಹಮ್ಮದ್ ಅಯಾನ್ ಪ್ರಥಮ ಸ್ಥಾನ, ವಿಜ್ಞಾನ ವಸ್ತು ಪ್ರದರ್ಶದಲ್ಲಿ ಪಿ. ಅಝ್ಮತುಲ್ ಮುಹೀಝ್ ಪ್ರಥಮ ಸ್ಥಾನ, ವಿಜ್ಞಾನ ಮಾದರಿಯಲ್ಲಿ ಸಾನ್ವಿಕ್ಷಾ ಪಿ. ವಿ ದ್ವಿತೀಯ ಸ್ಥಾನ, ಗಣಿತ ಮಾದರಿಯಲ್ಲಿ ಹೃಷಿಕೇಶ್ ನಾಯಕ್ ತೃತೀಯ ಸ್ಥಾನ, ಗಣಿತ ರಸಪ್ರಶ್ನೆಯಲ್ಲಿ ನಿಹಾಲ್ ಎಚ್ ಶೆಟ್ಟಿ, ಸುಹಾಸ್ ಬನಾಕರ್ ಹಾಗೂ ಅನೂಪ್ ಸಿಂಗ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ .ಪ್ರಥಮ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜ್ಞಾನ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.