ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ, ಮಹಿಳಾ ಗ್ರಾಮ ಸಮಿತಿಯಿಂದ “ಬಿರುವೆರೆನ ಕೆಸರ್ದ ಗೊಬ್ಬು “

0

ಹಿರೇಬಂಡಾಡಿ :ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾಮ ಸಮಿತಿ, ಹಿರೇಬಂಡಾಡಿ ಇವರ ಆಶ್ರಯದಲ್ಲಿ ಆ. 20 ರಂದು “ಬಿರುವೆರೆನ ಕೆಸರ್ದ ಗೊಬ್ಬು ” ಕಾರ್ಯಕ್ರಮವು ಎಲಿಯ ಗಂಗಾಧರ ಇವರ ಗದ್ದೆಯಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಹಿರಿಯರಾದ ಸೋಮಪ್ಪ ಪೂಜಾರಿ ಎಲಿಯ ನೆರವೇರಿಸಿದರು. ಕೆಸರು ಗದ್ದೆಗೆ ಪ್ರವೇಶೋತ್ಸವವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ನಿವೃತ್ತ ಬಿ.ಎಸ್.ಎನ್.ಎಲ್ ಜೂನಿಯರ್ ಇಂಜಿನಿಯರ್ ಉಷಾ ಅನಿಲ್ ನೆರವೇರಿಸಿ, ನಂತರ ಕೆಸರು ಗದ್ದೆಗೆ ಹಾಲು ಎರೆಯುವ ಮೂಲಕ ಹಿರಿಯರಾದ ದೇವಪ್ಪ ಪೂಜಾರಿ ಪಡ್ಪು ಮತ್ತು ವಿನೋದ್ ಬೊಂಟ್ರಪಾಲು ಚಾಲನೆ ನೀಡಿದರು.

ವಿನೋದ್ ಬೊಂಟ್ರಪಾಲು ಇವರು ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ನವೀನ್ ಪಡ್ಪು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಕ್ರೀಡಾ ಕೂಟಗಳಿಂದ ನಮ್ಮ ಸಂಘಟನೆಗಳು ಬಲಿಷ್ಠವಾಗುತ್ತದೆ. ಅದರಲ್ಲೂ ಯಾವುದೇ ಸಂಘಟನೆಗಳ ನೆರವು ಇಲ್ಲದೆ ಕೇವಲ ಗ್ರಾಮ ಸಮಿತಿಯ ಮೂಲಕ ಇಂತಹ ಕೆಸರುಗದ್ದೆ ಅಯೋಜಿಸಿರುವುದು ಶ್ಲಾಘನೀಯ ಎಂದರು.

ಪುತ್ತೂರು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಹಿರಿಯರ ಶ್ರಮದಿಂದ ರಚಿತವಾಗಿ ಗ್ರಾಮ ಸಮಿತಿ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಉತ್ತಮವಾಗಿ ನಡೆಯುತ್ತಿದೆ, ಇಂದು ಕೆಸರುಗದ್ದೆ ಕಾರ್ಯಕ್ರಮದಿಂದ ಇನ್ನಷ್ಟು ಬಲ ಬಂದಿದೆ. ತಾಲೂಕು ಬಿಲ್ಲವ ಸಂಘದಲ್ಲಿ ಗ್ರಾಮ ಸಮಿತಿಯು ಪ್ರತಿಷ್ಠಿತ ಸಮಿತಿಯಾಗಿ ಮೂಡಿ ಬರಲೆಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾಂಭವಿ ಸುರೇಶ್, ಉಪ್ಪಿನಂಗಡಿ ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ತಾಲೂಕು ಮಹಿಳಾ ವೇದಿಕೆಯ ಉಪಾಧ್ಯಕ್ಷೆ ವಿದ್ಯಾ ಶಿವಚಂದ್ರ, ಶಿರಾಡಿ ಶಾಮಿಯಾನದ ಮಾಲಕ ಯೋಗಾನಂದ ಬೇರಿಕೆ, ಸ್ಥಳದಾನಿ ಗಂಗಾಧರ ಪೂಜಾರಿ ಎಲಿಯ ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಪೂರ್ಣಿಮಾ ಮತ್ತು ನಿಶ್ಮಿತ ಪ್ರಾರ್ಥಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ನವೀನ್ ಪಡ್ಪು ಸ್ವಾಗತಿಸಿ, ವಿನೋದ್ ಬೊಂಟ್ರಪಾಲು ಕಾರ್ಯಕ್ರಮ ನಿರೂಪಿಸಿದರು.ಚಂದ್ರಶೇಖರ ಕಾರೆದಕೋಡಿ, ಸದಾಶಿವ ಬಂಗೇರ, ವಸಂತ ಕಜೆ, ಲಕ್ಷೀಶ ನಿಡ್ಡೆಂಕಿ, ರವಿ ಸೂರ್ಯ, ನಾರಾಯಣ ಬಂಗೇರ ಎಲಿಯ, ಪವಿತ್ರ ಎಲಿಯ, ಸುಚೇತ ಎಲಿಯ, ಕವಿತ, ಪ್ರಮೀಳಾ, ಸೌಮ್ಯ ಅಶೋಕ್ ಕುಮಾರ್, ಶ್ರೀಮಾ ಹಾಗೂ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here