ಪುತ್ತೂರಿನ ಪ್ರಥಮ ಬಿ ಫಾರ್ಮಾ ಕಾಲೇಜು ವಿವೇಕಾನಂದ ಇನ್ಸ್ ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಶುಭಾರಂಭ

0

ಪುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿವೇಕಾನಂದ ವಿದ್ಯಾ ವರ್ಧಕ ಸಂಘದ 80 ನೇ ಸಂಸ್ಥೆಯಾದ ಪುತ್ತೂರಿನ ಪ್ರಥಮ ಬಿ. ಫಾರ್ಮ ಕಾಲೇಜು ವಿವೇಕಾನಂದ ಇನ್ಸ್ ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಸೆ.4ರಂದು ಉದ್ಘಾಟನೆಗೊಂಡಿತು.

ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವಿಭಾಗವನ್ನು ಭಾರತ ಸರಕಾರದ ಆರೋಗ್ಯ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉದ್ಘಾಟಿಸಿದರು. ಬಳಿಕ ಅವರು ಕೇಶವ ಸಂಕಲ್ಪ ದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳಿಂದ ಉದ್ಘಾಟಿಸುವ ಮೂಲಕ ಎಲ್ಲರಿಗೂ ಮಾದರಿಯಾದರು. ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಕೆ ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳಿಂದ ಉದ್ಘಾಟಿಸಿ ಮಾದರಿಯಾದ ಸಚಿವೆ ಭಾರತಿ ಪ್ರವೀಣ್ ಪವಾರ್

ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜೀವ ಗಾಂಧೀ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಸಿಂಡಿಕೇಟ್ ಸದಸ್ಯ ಡಾ.ಎಸ್ ರಾಮಚಂದ್ರ ಸೆಟ್ಟಿ ಹಾಗೂ ವಿವೇಕಾನಂದ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಇನ್ಸ್ ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಗೋಪಿನಾಥ ಶೆಟ್ಟಿ , ಸಂಚಾಲಕ ಗೋವಿಂದ ಪ್ರಕಾಶ್ ಸಾಯ, ಪ್ರಾಂಶುಪಾಲ ಡಾ.ಗುರುರಾಜ ಎಂ ಪಿ ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾ ವರ್ಧಕ ಸಂಘದ ಆಶ್ರಯದಲ್ಲಿ ಈಗಾಗಲೇ 79 ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇದೀಗ ಔಷಧೀಯ ರಂಗದಲ್ಲಿಯೂ ಶಿಕ್ಷಣ ನೀಡಲು ಮುಂದಾಗಿದ್ದು ವಿದ್ಯಾ ವರ್ಧಕ ಸಂಘದ 80ನೇ ಸಂಸ್ಥೆಯಾಗಿ ಬಿ. ಫಾರ್ಮಾ ಕಾಲೇಜು ಪ್ರಾರಂಭಗೊಂಡಿದೆ. ಇದಕ್ಕೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಹಾಗೂ ಕರ್ನಾಟಕ ಸರಕಾರದಿಂದ ಅಧೀಕೃತ ಮಾನ್ಯತೆ ದೊರೆತಿದೆ. ರಾಜೀವ ಗಾಂಧೀ ಯುನಿವರ್ಸಿಟಿ ಆಪ್ ಹೆಲ್ತ್ ಸೈನ್ಸ್ ಬೆಂಗಳೂರು ಇದರಡಿಯಲ್ಲಿ ಪ್ರಾರಂಭಿಸಲು ಕರ್ನಾಟಕ ಸರಕಾರ ಹಾಗೂ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅಧಿಕೃತ ಒಪ್ಪಿಗೆ ದೊರೆತಿದೆ.


ಪುತ್ತೂರಿನ ಪ್ರಥಮ ಬಿ ಫಾರ್ಮಾ ಕಾಲೇಜು:
ಮಂಗಳೂರು ಹೊರತು ಪಡಿಸಿದರೆ ಮಡಿಕೇರಿ ಸೇರಿದಂತೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಪುತ್ತೂರಿನಲ್ಲಿ ಪ್ರಥಮವಾಗಿ ಬಿ ಫಾರ್ಮಾ ಕಾಲೇಜು ವಿವೇಕಾನಂದ ಇನ್ಸ್ ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರಾರಂಭಗೊಂಡಿದೆ. ಇದರ ಮೂಲಕ ಫಾರ್ಮಸಿ ಕೋರ್ಸುಗಳಿಗೆ ವಿದ್ಯಾರ್ಥಿಗಳು ದೂರದ ಮಂಗಳೂರನ್ನು ಅವಲಂಬಿಸಬೇಕಾದ ಆವಶ್ಯಕತೆಯಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.


ಬಿ ಫಾರ್ಮಾ ಕೋರ್ಸುಗಳು:
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ ಮುಗಿಸಿ ಸಮರ್ಪಕವಾದ ಉದ್ಯೋಗ ಪಡೆದುಕೊಳ್ಳುವ ಸವಾಲಾಗಿರುವ ಸಮಯದಲ್ಲಿ ಬಿ ಫಾರ್ಮಾ ಕೋರ್ಸುಗಳು ಸಹಕಾರಿಯಾಗಲಿದೆ. ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಬಿ.ಫಾರ್ಮಾ ಕೋರ್ಸು ಪಡೆಯಬಹುದು. ಒಟ್ಟು 14 ವರ್ಷದ ಕೋರ್ಸುಗಳನ್ನು ಹೊಂದಿದ್ದು ಇದರಲ್ಲಿ ಹ್ಯೂಮನ್ ಪಿಸಿಯೋಲಾಜಿ, ಮೆಡಿಸಿನಲ್ ಕೆಮಿಸ್ಟ್ರಿ, ಫಾರ್ಮಕೋಲಾಜಿ, ಹರ್ಬಲ್ ಡ್ರಗ್ಸ್, ಬಯೋಕೆಮಿಸ್ಟ್ರೀ, ಫಾರ್ಮಾಸ್ಯುಟಿಕ್ಸ್ ಮುಂತಾದ ವಿಷಯಗಳನ್ನು ಒಳಗೊಂಡಿದೆ.


ಬಿ ಫಾರ್ಮಾ ಕಾಲೇಜಿಗೆ ಆವಶ್ಯಕವಾದ ಕಟ್ಟಡಗಳು ಈಗಾಗಲೇ ವಿವೇಕಾನಂದ ಕಾಲೇಜಿನ ಕ್ಯಾಂಪಸ್ ನಲ್ಲಿ ನಿರ್ಮಾಣಗೊಂಡಿದೆ. ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ, ಅನುಭವಸ್ಥ ಉಪನ್ಯಾಸಕರ ತಂಡವನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಹಸಿರು ವಾತಾವರಣವನ್ನು ಕಲ್ಪಿಸಲಾಗಿದ್ದು ಪರಿಪೂರ್ಣ ಬಿ ಪಾರ್ಮಾ ಕಾಲೇಜು ಆಗಿದೆ. ಜೊತೆಗೆ ಕ್ಯಾಂಪಸ್ ನಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಪತ್ರಿಕೆ ಹಾಗೂ ಕೋರ್ಸುಗಳಿಗೆ ಸಂಬಂದಿಸಿದ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಹೊಂದಿದೆ. ಅಲ್ಲದೆ ಔಷಧೀಯ ಸಸ್ಯಗಳನ್ನು ಒಳಗೊಂಡ ಸಸ್ಯ ಶಾಸ್ತ್ರೀಯ ಉದ್ಯಾನ, ಜಿಮ್ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳು, ಪ್ರತ್ಯೇಕ ಹಾಸ್ಟೆಲ್, ಎಟಿಎಂ, ಬ್ಯಾಂಕ್, ಕೋ ಆಪರೇಟಿವ್ ಸೊಸೈಟಿ, ಕೆಫೆಟೇರಿಯಾ ಹಾಗೂ ಬಸ್ ಸೌಲಭ್ಯಗಳನ್ನು ಒಳಗೊಂಡಿದೆ.



LEAVE A REPLY

Please enter your comment!
Please enter your name here