ಅಧ್ಯಕ್ಷರಾಗಿ ಮೊಹಮ್ಮದ್ ರಜಾಕ್, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್,ಕಾರ್ಯದರ್ಶಿಯಾಗಿ ಅಬ್ದುಲ್ ಶಮೀರ್
ನಿಡ್ಪಳ್ಳಿ; ಸರಕಾರಿ ಪ್ರೌಢ ಶಾಲೆ ಬೆಟ್ಟಂಪಾಡಿ ಇದರ ನೂತನ ಹಿರಿಯ ವಿದ್ಯಾರ್ಥಿ ಸಂಘವನ್ನು ಅ.26 ರಂದು ರಚಿಸಲಾಯಿತು.ಅಧ್ಯಕ್ಷರಾಗಿ ಮೊಹಮ್ಮದ್ ರಜಾಕ್,ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್,ಕಾರ್ಯದರ್ಶಿಯಾಗಿ ಅಬ್ದುಲ್ ಶಮೀರ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಜೊತೆ ಕಾಯದರ್ಶಿ ಯಾಗಿ ರೇವತಿ.ಪಿ, ಕೋಶಾಧಿಕಾರಿಯಾಗಿ ನಿಖಿಲ್ ಕುಮಾರ್ ಮಡ್ಯಂಪಾಡಿ ,ಕ್ರೀಡಾ ಕಾರ್ಯದರ್ಶಿಯಾಗಿ ಸಿದ್ದೀಕ್ ತಂಬುತ್ತಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶೇಷನ್ ಪಾರ,ಸಂಘಟನಾ ಕಾರ್ಯದರ್ಶಿಗಳಾಗಿ,ಹರೀಶ್ ಗೌಡ ಜಿ, ದಿನೇಶ್ ಎಂ. ಮಿತ್ತಡ್ಕ, ಗೌರವ ಸಲಹೆಗಾರರಾಗಿ ಮುಖ್ಯ ಗುರು ವಿಜಯ ಕುಮಾರ್ ಎಂ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಕೆ.ವಿ ಇವರನ್ನು ಆರಿಸಲಾಯಿತು. ಅಲ್ಲದೆ ಕಾರ್ಯಕಾರಿ ಸದಸ್ಯರುಗಳಾಗಿ ಗಣೇಶ್ ಎಂ. ಮಿತ್ತಡ್ಕ, ವೈಭವ್ ಕತ್ತಲೆಕಾನ, ಲಕ್ಷ್ಮೀ ನಾರಾಯಣ ನುಳಿಯಾಲು, ರೇಖಾ ಬೆಳ್ಳಾರೆ, ಶ್ರಾವ್ಯ ಪಾರ, ಮೋಹನ ಜಿ. ಗುಮ್ಮಟೆಗದ್ದೆ, ಮನೋಹರ ಎಂ, ಆರೀಫ್ ಕೋನಡ್ಕ, ಶರೀಫ್ ವಿಜಯನಗರ, ರಾಜೇಶ್ ಕೈಕಾರ, ಶಾಫಿ ಕೆ. ನಿಡ್ಪಳ್ಳಿ, ಜಗದೀಶ್ ಬೇರಿಕೆ, ದಿನೇಶ್ ಜಿ. ಕಲ್ಪನೆ, ದಿನೇಶ್ ಕೈಕಾರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಶಾಲೆಯ ಅಭಿವೃದ್ಧಿ ಮತ್ತು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ನಡೆಯುವ ಇತರ ಚಟುವಟಿಕೆಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದಿಂದ ನೆರವು ನೀಡುವ ಬಗ್ಗೆ ಚರ್ಚಿಸಲಾಯಿತು.ಎಸ್.ಡಿ.ಎಂ.ಸಿ ಅಧ್ಯಕ್ಷ ಮಾಧವ ಪೂಜಾರಿ ರೆಂಜ ಶುಭ ಹಾರೈಸಿದರು.
ಶೇಷನ್ ಪಾರ ಪ್ರಾರ್ಥಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಕೆ.ವಿ ಸ್ವಾಗತಿಸಿದರು. ಮುಖ್ಯ ಗುರು ವಿಜಯ ಕುಮಾರ್.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಬ್ದುಲ್ ಶಮೀರ್ ವಂದಿಸಿದರು.