ವಿದ್ಯಾಭಾರತಿ ಜ್ಞಾನ ವಿಜ್ಞಾನ ಮೇಳ ದ.ಕ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಆ. ಮಾ. ಶಾಲೆಗೆ ಹಲವು ಬಹುಮಾನ

0

ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗಳು ಆ. 26ರಂದು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ನಡೆಯಿತು ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶಿಶು ವರ್ಗ ವಿಭಾಗ:

ವಿಜ್ಞಾನ ಪ್ರಯೋಗದಲ್ಲಿ ಅಭೀಷ್ಠ ಶಂಕರ ಶರ್ಮ(5 ನೇ)ಪ್ರಥಮ ಸ್ಥಾನ, ಗಣಿತ ಮಾದರಿಯಲ್ಲಿ 4 ನೇ ಅವನಿ.ಪಿ ರಾವ್  ದ್ವಿತೀಯ  ಸ್ಥಾನ,  ವಿಜ್ಞಾನ ಮಾದರಿಯಲ್ಲಿ ತರಗತಿಯ ಆರ್ಯನ್ (5 ನೇ) ದ್ವಿತೀಯ  ಸ್ಥಾನ, ಗಣಿತ ಪ್ರಯೋಗದಲ್ಲಿ ತರಗತಿಯ ಸಮರ್ಥ ಸುಮಂತ್( 5ನೇ) ತೃತೀಯ  ಸ್ಥಾನ,  ಪಡೆದಿರುತ್ತಾರೆ.

ಬಾಲ ವರ್ಗ ವಿಭಾಗ:

ಗಣಿತ ಪ್ರಯೋಗದಲ್ಲಿ ವಿಜ್ಞಾನ ಮಾದರಿಯಲ್ಲಿ ತರಗತಿಯ ಶಮನ್.ಎನ್(8ನೇ) ಪ್ರಥಮ ಸ್ಥಾನ, ತರಗತಿಯ ಪ್ರೀತಿ.ಪಿ.ಪ್ರಭು(8ನೇ) ಪ್ರಥಮ ಸ್ಥಾನ, ವೇದಗಣಿತ ರಸಪ್ರಶ್ನೆಯಲ್ಲಿ  ನಿರೀಕ್ಷಿತ್ ಹೆಗ್ಡೆ(8 ನೇ), ತರಗತಿಯ ಗೌತಮಕೃಷ್ಣ (8 ನೇ) ಮತ್ತು ಶುಭನ್(7 ನೇ) ಈ 3 ವಿದ್ಯಾರ್ಥಿಗಳ ತಂಡ – ಪ್ರಥಮ ಸ್ಥಾನ, ಗಣಿತ ಮಾದರಿಯಲ್ಲಿ  ದೀಪ್ತಿ ಕುಬುಣುರಾಯ( 7ನೇ) ದ್ವಿತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ ಎನ್.ಅಭಯ್(8 ನೇ) ತೃತೀಯ ಸ್ಥಾನ, ಗಣಿತ ಮಾದರಿಯಲ್ಲಿ ವೈಷ್ಣೀ ರೈ (7ನೇ) ತೃತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ ಓಂಕಾರ್ ಮಯ್ಯ ( 8 ನೇ) ತೃತೀಯ ಸ್ಥಾನ, ವಿಜ್ಞಾನ ಸೆಮಿನಾರ್‍ನಲ್ಲಿ ಅನಘ.ಕೆ.ಆರ್(6ನೇ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಕಿಶೋರ ವರ್ಗ ವಿಭಾಗ:

ಗಣಿತ ಪ್ರಯೋಗದಲ್ಲಿ ಕಿಶನ್ ಪ್ರಭು(9ನೇ) ದ್ವಿತೀಯ ಸ್ಥಾನ,  ಗಣಿತ  ಮಾದರಿಯಲ್ಲಿ ನಿರೀಕ್ಷಾ(10ನೇ) ದ್ವಿತೀಯ ಸ್ಥಾನ, ಸಂಸ್ಕೃತಿಜ್ಞಾನ ಆಶುಭಾಷಣದಲ್ಲಿ ಸಾನ್ವಿ.ಬಿ(10ನೇ) ತೃತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ ಹೆಚ್.ತನ್ವಿ  ನಾಯಕ್(9ನೇ) ಮತ್ತು ದಿಹರ್ಷ ತೃತೀಯ ಸ್ಥಾನ  ಪಡೆದುಕೊಂಡಿರುತ್ತಾರೆ.

ಪ್ರಥಮ ಸ್ಥಾನ ವಿದ್ಯಾರ್ಥಿಗಳು ಗುಲ್ಬರ್ಗದಲ್ಲಿ ನಡೆದ ಪ್ರಾಂತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ ಎಂದು  ಶಾಲಾ ಮುಖ್ಯೋಪಾಧ್ಯಾಯರು  ಶಾಲಾ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here