ಉಪ್ಪಿನಂಗಡಿ: ಅಪಾಯಕಾರಿ ಗೆಲ್ಲುಗಳ ತೆರವು

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಅಪಾಯಕಾರಿ ಮರದ ಗೆಲ್ಲುಗಳನ್ನು ಗೃಹರಕ್ಷಕ ದಳದವರನ್ನೊಳಗೊಂಡ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದವರು ತೆರವುಗೊಳಿಸಿದರು.


ಶಾಲೆಯ ಆವರಣದಲ್ಲಿ ಅಪಾಯಕಾರಿಯಾಗಿದ್ದ ಗೆಲ್ಲುಗಳನ್ನು ತೆರವುಗೊಳಿಸುವಂತೆ ಶಾಲಾ ಮುಖ್ಯೋಪಾಧ್ಯಾಯರು ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ಉಪತಹಶೀಲ್ದಾರರ ಸೂಚನೆಯಂತೆ ಪ್ರವಾಹ ರಕ್ಷಣಾ ತಂಡದವರು ಮರದ ಗೆಲ್ಲುಗಳನ್ನು ಸೆ.4ರಂದು ತೆರವುಗೊಳಿಸಿದರು. ಈ ಕಾರ್ಯದಲ್ಲಿ ಪ್ರವಾಹ ರಕ್ಷಣ ತಂಡದ ಮುಖ್ಯಸ್ಥ ದಿನೇಶ್ ಬಿ., ಎಎಸ್‌ಎಲ್ ಜನಾರ್ದನ ಆಚಾರ್ಯ, ವಸಂತ ಕೆ., ಡೀಕಯ್ಯ ಎ., ಸಮದ್, ಶಿವಪ್ರಸಾದ್ ತೊಡಗಿಸಿಕೊಂಡರು. ಈ ಸಂದರ್ಭ ಶಾಲಾ ಪದವಿಧೇತರ ಮುಖ್ಯೋಪಾಧ್ಯಾಯ ಎಸ್. ಹನುಮಂತಯ್ಯ, ಮೆಸ್ಕಾಂ ಪವರ್‌ಮ್ಯಾನ್ ಹನುಮಂತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here