ಪುತ್ತೂರು: ಕರ್ನಾಟಕ ಸರಕಾರದ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಶೂ ಭಾಗ್ಯ ಇದರ ಭಾಗವಾಗಿ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯಕ್ರಮ ಶಾಲಾ ಕಾರ್ಯಾಧ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ಷೀರಭಾಗ್ಯ, ಮದ್ಯಾಹ್ನದ ಊಟ, ಮೊಟ್ಟೆ ಇವೆಲ್ಲವೂ ಸಮಯಕ್ಕೆ ದೊರಕಿಸಿ ಕೊಟ್ಟಿರುವುದು ಸರಕಾರದ ಯೋಜನೆಯದ್ದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಸವಿತಾ, ಹಸೈನಾರ್ ರೆಂಜಲಾಡಿ, ಧನಲಕ್ಷ್ಮೀ, ಇಸ್ಮಾಯಿಲ್ ಕೂಡುರಸ್ತೆ, ಸರೋಜಿನಿ ಹಾಗೂ ಶಾಲಾ ಶಿಕ್ಷಕರಾದ ಉಮಾಶಂಕರ್, ವೆಂಕಟೇಶ್, ಉಮೈರಾ ತಬಸ್ಸಂ, ಕಾಂಚನ, ಹರ್ಷಿತಾ, ಕಮಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಸಹದೇವ್ ವಂದಿಸಿದರು.